ಸೇವಿಸಿ ಒಂದು ಹಿಡಿ ಮೊಳಕೆ ಕಾಳು

ಸೇವಿಸಿ ಒಂದು ಹಿಡಿ ಮೊಳಕೆ ಕಾಳು

ಬೆಂಗಳೂರು, ಮಾ. 3 : ಮನುಷ್ಯನಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ವಯಸ್ಸು ಮೂವತ್ತು ಆಗುವಾಗಲೇ ನೂರಾರು ಸಮಸ್ಯೆಗಳು ಆವರಿಸಿಕೊಳ್ಳುತ್ತವೆ. ಇದರಿಂದ ಮುಕ್ತಿ ಪಡೆಯಲು ಮೊಳಕೆ ಕಾಳು ಸೇವಿಸಿದರೆ ಉತ್ತಮ. ಮೊಳಕೆ ಕಾಳು ತಿನ್ನುವ ಮೂಲಕ ನೀವು ಬೊಕ್ಕ ತಲೆ ಸಮಸ್ಯೆ ನಿವಾರಣೆ ಮಾಡಬಹುದು. ಹೌದು ಹೆಸರು ಕಾಳು ಎಲ್ಲಾ ಕಾಳುಗಳಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಇದರಲ್ಲಿ ವಿಟಾಮಿನ್ ಎ, ಬಿ, ಸಿ ಮತ್ತು ಈ , ಪೊಟ್ಯಾಶಿಯಂ, ಐರನ್, ಕ್ಯಾಲ್ಶಿಯಂ ಕೂಡ ಹೆಚ್ಚಾಗಿರುತ್ತದೆ. ಪ್ರತಿದಿನ ಮೊಳಕೆ ಬಂದ ಮೊಳಕೆ ಕಾಳು ತಿನ್ನುವುದರಿಂದ ಕೂದಲು ದಟ್ಟವಾಗುತ್ತದೆ, ಜೊತೆಗೆ ಸಧೃಡವಾಗುತ್ತದೆ.
ಮೊಳಕೆ ಬಂದ ಹೆಸರು ಕಾಳು ಸೇವನೆ ಮಾಡಿದರೆ ದೇಹಕ್ಕೆ ೩೦ ಕ್ಯಾಲರಿ ಮತ್ತು ಒಂದು ಗ್ರಾಮ್ ಫ್ಯಾಟ್ ಸಿಗುತ್ತದೆ. ಇದರಲ್ಲಿ ಮೆಗ್ನೇಶಿಯಂ, ಕಾಪರ್, ಫೋಲೇಟ್, ವಿಟಾಮಿನ್, ವಿಟಾಮಿನ್ ಸಿ, ಫೈಬರ್, ಪೊಟ್ಯಾಶಿಯಂ, ಫಾಸ್ಫೋರಸ್, ಮೆಗ್ನೇಸಿಯಂ, ಐರನ್, ವಿಟಾಮಿನ್ ಬಿ ೬, ನಿಯಾಸಿಸ್, ಥೈಮಿನ್ ಮತ್ತು ಪ್ರೊಟೀನ್ ಅಂಶಗಳಿವೆ.
ಫೈಬರ್ ಹೆಚ್ಚಿರುವುದರಿಂದ ತೂಕ ಕಳೆದುಕೊಳ್ಳಲು ಹಾಗೂ ಮಲಬದ್ಧತೆ ನಿವಾರಣೆಗೆ ಕಾರಣವಾಗುತ್ತವೆ.  ಪ್ರತಿದಿನ ಮೊಳಕೆಕಾಳುಗಳ ಜ್ಯೂಸ್ ಸೇವಿಸುವುದರಿಂದ ವಿಟಮಿನ್ ಬಿ ಹೆಚ್ಚಾಗಿ ದೊರೆತು ಕಣ್ಣು ಮತ್ತು ಚರ್ಮವನ್ನು ಹೆಚ್ಚು ಹೊಳಪಾಗಿಡುತ್ತವೆ.
ಕಾಳುಗಳಲ್ಲಿ ಮತ್ತು ಧಾನ್ಯಗಳಲ್ಲಿ ಹೇರಳವಾಗಿರುವ ಕಬ್ಬಿಣ ಮತ್ತು ತಾಮ್ರಗಳು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ.
ಮೊಳಕೆಯೊಡೆದ ಧಾನ್ಯಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಇವು ರಕ್ತದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ.

Related