ಡರ್ಬನ್ ನಲ್ಲಿ ಇಂಗ್ಲೆಂಡ್ ದರ್ಬಾರ್

ಡರ್ಬನ್ ನಲ್ಲಿ  ಇಂಗ್ಲೆಂಡ್ ದರ್ಬಾರ್

ಡರ್ಬನ್, ಫೆ. 15 : ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಒಂದು ರನ್ ಅಂತರದ ಗೆಲುವು ದಾಖಲಿಸಿತ್ತು. ಆತಿಥೇಯ ಹರಿಣಗಳ ಮೇಲೆ ಆಂಗ್ಲರ ಪಡೆ ಎರಡು ರನ್ ಅಂತರದ ರೋಚಕ ಗೆಲುವು ಬಾರಿಸಿದೆ. ಮೂರು ಪಂದ್ಯಗಳ ಪಂದ್ಯ 1-1ರ ಅಂತರದಲ್ಲಿ ಸಮಬಲಗೊಂಡಿದ್ದು, ಅಂತಿಮ ಪಂದ್ಯಕ್ಕೆ ಹೆಚ್ಚಿನ ರೋಚಕತೆ ಮನೆ ಮಾಡಿದ್ದು ಸರಣಿ ವಿಜೇತರ ನಿರ್ಣಾಯವಾಗಲಿದೆ. ಡರ್ಬನ್ನ ಕಿಂಗ್ಸ್ಮೇಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಏಳು ವಿಕೆಟ್ ನಷ್ಟಕ್ಕೆ 204 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಜೇಸನ್ ರಾಯ್ (40), ಬೆನ್ ಸ್ಟೋಕ್ಸ್ (47*) ಹಾಗೂ ಮೊಯಿನ್ ಅಲಿ (39) ಬಿರುಸಿನ ಬ್ಯಾಟಿಂಗ್ ಕಟ್ಟಿದರು. ಈ ಪೈಕಿ ಬೆನ್ ಸ್ಟೋಕ್ಸ್ 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯ ಹಂತದಲ್ಲಿ ಮೊಯಿನ್ ಅಲಿ 11 ಎಸೆತಗಳಲ್ಲೇ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ನೆರವಿನಿಂದ 39 ರನ್ ಸಿಡಿಸಿದರು. ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಕ್ಷಿಂಟನ್ ಡಿ ಕಾಕ್
ಬಿರುಸಿನ ಹೋರಾಟ ವ್ಯರ್ಥವೆನಿಸಿತು. 17 ಎಸೆತಗಳಲ್ಲೇ ಫಿಫ್ಟಿ ಸಾಧನೆ ಮಾಡಿರುವ ಡಿ ಕಾಕ್ 22 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರ್ಗಳ ನೆರವಿನಿಂದ 65 ರನ್ ಗಳಿಸಿ ಅಬ್ಬರಿಸಿದರು. ಆದರೆ ಡಿ ಕಾಕ್ ಪತನದ ಬೆನ್ನಲ್ಲೇ ಹರಿಣಗಳ ಪಡೆ ಹಿನ್ನೆಡೆ ಅನುಭವಿಸಿತು. ಇದು ಟಿ20 ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ನಿಂದ ದಾಖಲಾದ ಬಿರುಸಿನ ಅರ್ಧಶತಕ ಸಾಧನೆಯಾಗಿದೆ. ಈ ಹಿಂದೆ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಎಬಿ ಡಿ ವಿಲಿಯರ್ಸ್ 21 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದ್ದರು. ಅದೇ ಸಾಲಿನಲ್ಲಿ ಡಿ ಕಾಕ್ ಕೂಡಾ ಆಂಗ್ಲರ ವಿರುದ್ಧ 21 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

Related