ಕನಸ್ಸನ್ನು ನನಸಾಗಿಸಿಕೊಂಡವರೆ ಸಾಧಕರು

  • In State
  • February 25, 2020
  • 414 Views
ಕನಸ್ಸನ್ನು ನನಸಾಗಿಸಿಕೊಂಡವರೆ ಸಾಧಕರು

ಪ್ರಜಾವಾಹಿನಿ-ತುಮಕೂರು : ಕಠಿಣ ಕಾರ್ಯ ಮತ್ತು ಸವಾಲುಗಳನ್ನು ಶ್ರದ್ಧೆ ಆಸಕ್ತಿ ಮತ್ತು ಉತ್ಸಾಹದಿಂದ ಧನಾತ್ಮಕ ಮನೋಭಾವದ ಮೂಲಕ ಇನ್ನೊಬ್ಬರ ಜೀವನವನ್ನು ಸುಖಮಯವಾಗಿಸುವ ನಿಟ್ಟಿನಲ್ಲಿ ಸತತ ಕಾರ್ಯನಿರ್ವಹಿಸುತ್ತ ತಮ್ಮ ಕನಸನ್ನು ನನಸಾಗಿಸಿಕೊಂಡವರು ಸಾಧಕರಾಗುತ್ತಾರೆಂದು ನವದೆಹಲಿಯ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಅಧ್ಯಕ್ಷರಾದ ಪ್ರೊ.ಮಾಣಿಕ್ಯರಾವ್ ಸಾಲುಂಖೆ ತಿಳಿಸಿದರು.
ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯದ ೧೩ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಘಟಿಕೋತ್ಸವ ಭಾಷಣ ಮಾಡಿದರು. ಸಂಕೀರ್ಣ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಗೆಲ್ಲಲು ವಿದ್ಯಾರ್ಥಿಗಳಿಗೆ ಬೇಕಾಗಿರುವ ಕೌಶಲ್ಯ ಮತ್ತು ಜ್ಞಾನವನ್ನು ವಿಶ್ವವಿದ್ಯಾನಿಲಯಗಳು ದಾರೆಯೆರುತ್ತವೆ. ಐತಿಹಾಸಿಕ ಹಿನ್ನೆಲೆಯುಳ್ಳ ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯದ ಮೂಲೆ-ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಗಿಲುನಂತಿದ್ದು, ಭಾರತ ಸರ್ಕಾರದ ಅನುಮೋದಿತ ಫುಡ್‌ಪಾರ್ಕ್, ಭಾರತೀಯ ನ್ಯೂಕ್ಲಿಯರ್ ಯೋಜನೆಯ ಪಿತಾಮಹ ಎಂದು ಖ್ಯಾತರಾಗಿರುವ ಪದ್ಮವಿಭೂಷಣ ಡಾ. ರಾಜರಾಮಣ್ಣರಂತಹ ಮೇರುವ್ಯಕ್ತಿ ಈ ನೆಲದಿಂದ ಪದವೀಧರಾಗಿರುವುದಕ್ಕೆ ಹೆಮ್ಮೆ ಪಡಬೇಕಾಗಿದೆ ಎಂದರು.
ಭಾರತದ ಸವಾಲುಗಳಲ್ಲಿ ಜನಸಂಖ್ಯೆಯನ್ನು ಮಾನಸಂಪ್ಮೂಲವನ್ನಾಗಿ ಪರಿರ್ವತಿಸುವ ಕಾರ್ಯ ವಿಶ್ವವಿದ್ಯಾನಿಯಲಗಳು ಮಾಡುತ್ತಿವೆ. ತುಮಕೂರು ವಿಶ್ವವಿದ್ಯಾನಿಲಯ ಅತಿ ಕಡಿಮೆ ಅವಧಿಯಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಗುಣಮಟ್ಟಕ್ಕೆ ಹೆಸರಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸರಿಸಮಾನವಾಗಿದೆ. ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ದಾಪುಗಾಲು ಹಾಕುತ್ತಿದೆ. ಇಲ್ಲಿಯ ಆಡಳಿತ ವೈಖರಿಯನ್ನು ಗಮನಿಸಿದಾಗ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್ ಸಿದ್ಧೇಗೌಡರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ, ಪ್ರಮಾಣ ಪತ್ರ, ಸ್ವರ್ಣಪದಕ ಪಡೆದ ಹಾಗೂ ಈ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಹತೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅರ್ಹತೆಯೊಂದಿಗೆ ನೈಜ ಜಗತ್ತನ್ನು ಪ್ರವೇಶಿಸುವುದಕ್ಕೆ ಅಣಿಯಾಗಿದ್ದೀರಿ, ಸುತ್ತಮುತ್ತಲಿನ ಅಡೆ-ತಡೆಗಳನ್ನು ದೃಢಸಂಕಲ್ಪದಿAದ ಮೆಟ್ಟಿ ಮುಂದಾಳತ್ವ ಗುಣವನ್ನು, ಮೌಲ್ಯಯುತ ನಡವಳಿಕೆ ಮತ್ತು ಬಲವಾದ ನೈತಿಕ ನಿರ್ಧಣ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧರಾಗಿರುವಿರಿ ಎಂದು ನಾನಾದರೂ ಭಾವಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವರುಗಳಾದ ಪ್ರೊ. ಕೆ.ಜೆ.ಸುರೇಶ್, ಪ್ರೊ.ಗಂಗಾನಾಯ್ಕ್, ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಮತ್ತು ಗಣ್ಯ ಅಧಿಕಾರಿಗಳು, ಆಯಾ ವಿಷಯಗಳ ವಿಭಾಗದ ಮುಖ್ಯಸ್ಥರುಗಳು, ಸ್ವರ್ಣಪದಕ ಪಡೆದ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related