ದ್ರಾವಿಡ್ ಮಗನಿಂದ ಡಬಲ್ ಸೆಂಚುರಿ

ದ್ರಾವಿಡ್ ಮಗನಿಂದ ಡಬಲ್ ಸೆಂಚುರಿ

ಬೆಂಗಳೂರು. ಫೆ. 18 : ಸಮಿತ್ ದ್ರಾವಿಡ್ ಡಬಲ್ ಸೆಂಚುರಿ ನೆರವಿನಿಂದ ಮಲ್ಯ ಅದಿತಿ ಅಂತರಾಷ್ಟ್ರೀಯ ಶಾಲೆ ತಂಡ 50 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 377 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಗ ಸಮಿತ್ ದ್ರಾವಿಡ್ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜ್ಯೂನಿಯರ್ ದ್ರಾವಿಡ್, ಎರಡು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜ್ಯೂನಿಯರ್ ದ್ರಾವಿಡ್, ಡಿ. 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡ ಝೋನ್ ವಿರುದ್ಧ ವೈಸ್ ಪ್ರೆಸಿಡೆಂಟ್ ಇಲೆವೆನ್ ಪರ ಬ್ಯಾಟ್ ಬೀಸಿದ ಸಮಿತ್ ದ್ರಾವಿಡ್, ಡಬಲ್ ಸೆಂಚುರಿ ಬಾರಿಸಿದ್ದರು. 256 ಎಸೆತಗಳಲ್ಲಿ 22 ಬೌಂಡರಿ ಬಾರಿಸಿ 201 ರನ್ ಕಲೆಹಾಕಿದ್ದರು. ಸಮಿತ್ ಅವರ ಬ್ಯಾಟ್ನಿಂದ ಮತ್ತೊಂದು ದ್ವಿಶತಕ ಮೂಡಿಬಂದಿದೆ. 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಮಲ್ಯ ಅದಿತಿ ಅಂತರಾಷ್ಟ್ರೀಯ ಶಾಲೆಯ ಪರ ಆಡಿದ ಸಮಿತ್, ಕೇವಲ 146 ಎಸೆತಗಳಲ್ಲಿ 33 ಬೌಂಡರಿ ಬಾರಿಸಿ 204 ರನ್ ಚಚ್ಚಿದ್ದಾರೆ. ಸದ್ಯ ಸಮಿತ್ ಅವರ ಬ್ಯಾಟ್ನಿಂದ ಮತ್ತೊಂದು ದ್ವಿಶತಕ ಮೂಡಿಬಂದಿದೆ.

Related