ಡಬಲ್ ಶೂಟರ್ ಗೆ ಮತ್ತೆ ಸಂಕಷ್ಟ

ಡಬಲ್ ಶೂಟರ್ ಗೆ ಮತ್ತೆ ಸಂಕಷ್ಟ

ಬೆಂಗಳೂರು: ಅಕ್ರಮಣ ಆಸ್ತಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿಐಬಿ ಆಗಾಗ ತನಿಖೆಗೆ ಕರೆ ನೀಡುತ್ತಲೇ ಇತ್ತು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸಿಬಿಐ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು(ಅಕ್ಟೋಬರ್ 19 ಗುರುವಾರ) ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ಸಹ ಹೈಕೋರ್ಟ್ ತೆರವುಗೊಳಿಸಿದ್ದು, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಮತ್ತೆ ಸಿಬಿಐ ತನಿಖೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಆರೋಪ ಹಿನ್ನೆಲೆ ಸಿಬಿಐನಲ್ಲಿ ಈ ಬಗ್ಗೆ ಕೇಸ್ ರದ್ದು ಕೋರಿದ್ದ ಅರ್ಜಿ ತೀರ್ಪು ಸಲ್ಲಿಸಲಾಗಿತ್ತು. ನ್ಯಾ. ಕೆ.ನಟರಾಜನ್ ಪೀಠದಿಂದ ಆದೇಶ ಸಂಪೂರ್ಣ ವಾಗಿದ್ದು ವಾದ ಪ್ರತಿವಾದ ಆಲಿಸಿತ್ತು. ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್  ಡಿಕೆ ವಿರುದ್ದ ಸಿಬಿಐ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು.

2014 – 2018ರ ಸಮಯದಲ್ಲಿ ಅಕ್ರಮ‌ ಆಸ್ತಿಗಳಿಕೆ ಆರೋಪ ಈ ಸಂಬಂಧ ಸಿಬಿಐ ತನಿಖೆ ರದ್ದು ಕೋರಿದ್ದ ಡಿ.ಕೆ.ಶಿವಕುಮಾರ್.  ಡಿಕೆ ಶಿವಕುಮಾರ್ ಪರ ಸಂದೇಶ್ ಚೌಟ ವಾದಿಸಿದ್ರು ಸಿಬಿಐ ಪರ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

 

Related