ರಾಜಕೀಯದಲ್ಲಿ ರಫ್ ಆಗಿ ಇರಬಾರದು: ಶಿವರಾಜಕುಮಾರ್

ರಾಜಕೀಯದಲ್ಲಿ ರಫ್ ಆಗಿ ಇರಬಾರದು: ಶಿವರಾಜಕುಮಾರ್

ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೀತಾ ಶಿವರಾಜ್ ಕುಮಾರ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ನಾಮಪತ್ರ ಸಲ್ಲಿಸಿದ ನಂತರ ನಟ ಶಿವರಾಜ್ ಕುಮಾರ್ ಅವರ ಮಾತನಾಡಿ, ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನಗೆ ಉತ್ತಮ ಸ್ಪಂದನೆ ಸಿಗುತ್ತಿರುವುದರಿಂದ ಈ ಬಾರಿ ನನ್ನ ಪತ್ನಿ ಗೀತಾ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಭರವಸೆಯ ಮಾತನ್ನು ಹೇಳಿದ್ದಾರೆ. ಇಂದು ತಮ್ಮ ಪತ್ನಿ ಗೀತಾ ಜೊತೆ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, “ಎಲ್ಲಿ ಹೋದರು ನಮಗೆ ಪಾಸಿಟಿವ್ ಸಪೋರ್ಟ್​ ಬರುತ್ತಿದೆ. ಅವರ ಸಂತೋಷಕ್ಕೆ ನಾನು ಹಾಡು ಹಾಡುತ್ತೇನೆ. ಅಲ್ಲಿ ಯಾವ ವಯಸ್ಸಿನವರಿಗೆ ಹೇಗೆ ಮಾತನಾಡಬೇಕೋ ಹಾಗೆ ಮಾತನಾಡುತ್ತೇನೆ.

ನಾನು ನನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಗೀತಾ ಯಾವಾಗಾಲೂ ಸಾಫ್ಟ್, ರಾಜಕೀಯಕ್ಕೆ ರಫ್ ಆಗಿ ಇರಬಾರದು. ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು. ಮಾತನಾಡುವ ಬದಲು ಕೆಲಸ ಮಾಡಬೇಕು. ಆ ಮೂಲಕ ನಮ್ಮ ಜವಾಬ್ದಾರಿ ತೋರಿಸಿಕೊಡಬೇಕು”. “ಮಾತನಾಡಿದರೆ ಸಾಲದು, ಮಾಡುವ ಕೆಲಸ ಜೋರಾಗಿ ಇರಬೇಕು. ಕೆಲಸ ಮಾಡುವ ಮನೋಭಾವ ಇರಬೇಕು.

Related