ದೊಡ್ಮನೆ ಸೊಸೆ ಕಾಂಗ್ರೆಸ್ ಸೇರ್ಪಡೆ

ದೊಡ್ಮನೆ ಸೊಸೆ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ ಉಪಸ್ಥಿತಿಯಲ್ಲಿ ಗೀತಾ ಶಿವರಾಜ್​​ಕುಮಾರ್ ಅವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಗೀತಾ ಅವರ ಸಹೋದರ, ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಕೂಡ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಡಿಕೆ ಶಿವಕುಮಾರ್ ಅವರು ಗೀತಾ ಶಿವರಾಜ್​ಕುಮಾರ್​ ಅವರಿಗೆ ಕಾಂಗ್ರೆಸ್​ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ವೇಳೆ ಗೀತಾ ಅವರು ಡಿಕೆಶಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದರು.

ಕಾಂಗ್ರೆಸ್​ ಸೇರ್ಪಡೆ ಬಳಿಕ ಮಾತನಾಡಿದ ಗೀತಾ ಅವರು, ಕಾಂಗ್ರೆಸ್ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಕ್ಷವಾಗಿದೆ. ನಮ್ಮ ತಂದೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ತುಂಬಾ ಸಂತಸ ತಂದಿದೆ. ಡಿಕೆ ಶಿವಕುಮಾರ್ ಅಣ್ಣನಿಗೆ ತುಂಬಾ ಥ್ಯಾಂಕ್ಸ್​ ಹೇಳುತ್ತೇನೆ ಎಂದರು.

 

Related