ಪುಟ್ಟ ಕಂದನ ಬದುಕಿಗೆ ಬೆಳಕಾದ ವೈದ್ಯ!

ಪುಟ್ಟ ಕಂದನ ಬದುಕಿಗೆ ಬೆಳಕಾದ ವೈದ್ಯ!

ಶಿರಾ: ಪುಟ್ಟ ಕಂದನ ಜೀವ ಉಳಿಸಲು, ಗರ್ಭೀಣಿ ಮಹಿಳೆಗೆ ಇಲ್ಲಿನ ವೈದ್ಯರೊಬ್ಬರು 75 ಸಾವಿರ ರೂಪಾಯಿ ವೆಚ್ಚದ ಜೌಷಧಿ(ಇಂಜಕ್ಷನ್) ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಹಣವಿಲ್ಲದೆ ಕಂಗಾಲಾಗಿದ್ದ ಬಡ ಕುಟುಂಬದ ನೆರವಿಗೆ ನಿಂತವರು ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್‍ಗೌಡ.

ಶಿರಾ ತಾಲ್ಲೂಕಿನ ಚಿರತಹಳ್ಳಿ ಗ್ರಾಮದ ಗರ್ಭಿಣಿ ಸಂಧ್ಯಾ ಮಂಜುನಾಥ್ ಆಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಪ್ರಥಮ ಗರ್ಭಾವಸ್ಥೆಯಲ್ಲಿ ಹಣ ವಿಲ್ಲದೇ ಸೂಕ್ತ ಸಮಯಕ್ಕೆ ಇಂಜಕ್ಷ ನ್ ತೆಗೆದು ಕೊಳ್ಳದ ಕಾರಣ ಜನ್ಮ ನೀಡುವ ಮುಂಚೆ ಪುಟ್ಟ ಕಂದ ಅಸುನೀಗಿತ್ತು. ಇದೀಗ ಎರಡನೇ ಬಾರಿ ಗರ್ಭೀಣಿಯಾಗಿರುವ ಸಂಧ್ಯಾ ಮತ್ತದೆ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಸತತ ಐದಾರೂ ತಿಂಗಳು ನಿತ್ಯ 500 ರೂಪಾಯಿ ಬೆಲೆಯ ಇಂಜಕ್ಷನ್ ನಿತ್ಯ ಪಡೆದರೆ ಮಾತ್ರ ಮಗು ಉಳಿಸಲು ಸಾಧ್ಯ ಎಂಬ ವೈದ್ಯರ ಸಲಹೆಯಿಂದ ಕಂಗಲಾಗಿದ್ದರು.

ಆಗ ಡಾ.ಸಿ.ಎಂ.ರಾಜೇಶ್‍ಗೌಡ ಜೌಷಧಿ ಕೊಡಿಸುವ ಭರವಸೆ ನೀಡಿ 75 ಸಾವಿರ ರೂಪಾಯಿ ವೆಚ್ಚದ ಜೌಷಧಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಸಂಧ್ಯಾ ಮಂಜುನಾಥ್ ಕುಟುಂಬಕ್ಕೆ ಜೌಷಧಿ ಹಸ್ತಾಂತರಿಸಿದರು. ಮುಖಂಡ ಪ್ರಕಾಶ್‍ಗೌಡ, ಶಾಂತರಾಜು, ಆಂಜಿನಪ್ಪ ಉಪಸ್ಥಿತರಿದ್ದರು.

ಬಡತನ ಶಾಶ್ವತವಲ್ಲ, ನಾವು ಮಾಡುವಂತ ಸೇವೆ ಭಗವಂತ ಮೆಚ್ಚುವಂತಿದ್ದರೆ ಸಾಕು. ಹೆಣ್ಣು ಜನ್ಮದಾತೆ ಇಂತಹ ವೇಳೆ ನಾವು ಬಡಹೆಣ್ಣು ಮಗಳಿಗೆ ನೀಡುವಂತ ಜೌಷಧಿ ಒಂದು ಮಗುವಿನ ಹುಟ್ಟು ಸಾವಿನ ಬಗ್ಗೆ ನಿರ್ಧಾರ ಮಾಡುತ್ತೆ. ಇಂತಹ ಸೇವೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತವೆ.
– ಡಾ.ಸಿ.ಎಂ.ರಾಜೇಶ್‍ಗೌಡ, ಸಮಾಜ ಸೇವಕ

**

ವೈದ್ಯರಲ್ಲಿ ದೇವರನ್ನು ಕಾಣು ಎಂಬ ಮಾತು ನಿಜವಾಗಿದೆ. ನನ್ನಂತ ಬಡಕುಟುಂಬಕ್ಕೆ ಇಷ್ಟು ದೊಡ್ಡ ವೆಚ್ಚದ ಜೌಷಧಿ ಡಾ.ಸಿ.ಎಂ.ರಾಜೇಶ್‍ಗೌಡ ಕೊಡಿಗೆಯಾಗಿ ಕೊಟ್ಟಿರುವುದು ದೇವರು ವ್ಯಕ್ತಿ ರೂಪದಲ್ಲಿ ಬಂದಿದ್ದಾನೆ ಅನಿಸುತ್ತದೆ.
– ಸಂಧ್ಯಾ ಮಂಜುನಾಥ್, ಗರ್ಭೀಣಿ ಮಹಿಳೆ, ಚಿರತಹಳ್ಳಿ

Related