ತುಳಸಿ ಗಿಡದ ಉಪಯೋಗ ನಿಮಗೆ ಗೊತ್ತೇ?

ತುಳಸಿ ಗಿಡದ ಉಪಯೋಗ ನಿಮಗೆ ಗೊತ್ತೇ?

ತುಳಸಿ ಎಲೆ ಎಂದ ತಕ್ಷಣ ನಮಗೆ ನೆನಪಾಗುವುದು ದೇವರು. ಹೌದು ತುಳಸಿ ಎಲೆಯನ್ನು ಸಾಮಾನ್ಯವಾಗಿ ನಾವು ದೇವರ ಪೂಜೆಗೆ ಬಳಸುತ್ತೇವೆ.

ತುಳಸಿ ಎಲೆ ಕೇವಲ ದೇವರ ಪೂಜೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಎಂದು ವೈದ್ಯರು ಹೇಳುತ್ತಾರೆ. ತುಳಸಿ ಎಲೆ ಸೇವನೆಯಿಂದ ನಮ್ಮ ಚರ್ಮರುದ್ಧಿಯಾಗುತ್ತದೆ ಮತ್ತು ನಮ್ಮ ಆರೋಗ್ಯದಲ್ಲಿರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ನಿವಾರಣೆ ಮಾಡುತ್ತಿದೆ.

ಯೆಸ್..ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ಕಿಡ್ನಿ ಕಲ್ಲುಗಳು ನಿವಾರಣೆ ಆಗುವುದು. ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಯುವುದು. ತುಳಸಿ ಎಲೆಗಳನ್ನು ಹಸಿಯಾಗಿ ತಿಂದರೆ ಅದರಿಂದ ಹಲವಾರು ಲಾಭಗಳು ಇವೆ ಮತ್ತು ಅದರ ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಬಹುದು.

ದೇಹ ಸಾಮರ್ಥ್ಯ: 20 ಗ್ರಾಂ ತುಳಸಿ ಬೀಜವನ್ನು ತೆಗೆದುಕೊಂಡು 40 ಗ್ರಾಂ ಸ್ಫಟಿಕ ಸಕ್ಕರೆ ಸೇರಿಸಿ ಎರಡನ್ನು ಮಿಶ್ರಣವನ್ನು ಮಾಡಿ. ಚಳಿಗಾಲದಲ್ಲಿ ದಿನನಿತ್ಯ ಈ ಮಿಶ್ರಣವನ್ನು ಸೇವಿಸುವುದರಿಂದ

ಕೆಮ್ಮು-ಸಂಬಂಧಿತ ಜ್ವರ: ತುಳಸಿ ದಳ, ಐದು ಲವಂಗಗಳು, 500 ಮಿಲಿ ಶುಂಠಿಯ ಸಾರವನ್ನು ಮಿಶ್ರಣವನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಫಿಲ್ಟರ್ ಮಾಡಿ ಮತ್ತು 10 ಗ್ರಾಂ ಜೇನುತುಪ್ಪ ಸೇರಿಸಿ. ಸೇವನೆ ಮಾಡಿದರೆ ಜ್ವರ ಕಡಿಮೆ ಮಾಡುತ್ತದೆ.

ವಾಂತಿ: ತುಳಸಿ ಎಲೆ 10 ತೆಗೆದುಕೊಳ್ಳಿ, 500 ಮಿ.ಗ್ರಾಂ ಏಲಕ್ಕಿ ಪುಡಿಯಲ್ಲಿ ಶುಂಠಿ ಸಾರವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ವಾಂತಿ ಸಮಸ್ಯೆಯನ್ನು ಪರಿಹಾರವಾಗುತ್ತದೆ.

 

 

Related