ಅಕ್ರೋಟ್ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಲಾಭ ಗೊತ್ತಾ

ಅಕ್ರೋಟ್ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಲಾಭ ಗೊತ್ತಾ

ಸಾಮಾನ್ಯವಾಗಿ ನಾವೆಲ್ಲರೂ ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡುತ್ತೇವೆ. ಈ ಡ್ರೈ ಫ್ರೂಟ್ಸ್ ಗಳಲ್ಲಿ ಯಾವುದು ನಮ್ಮ ಮೆದುಳು ಮತ್ತು ಬುದ್ಧಿಗೆ ಉಪಯುಕ್ತವೆಂದು ನಮಗೆ ಗೊತ್ತಿರದೆ ನಾವು ಸೇವನೆ ಮಾಡುತ್ತೇವೆ.

ಎಲ್ಲರಿಗೂ ಗೊತ್ತಿರುವ ಹಾಗೆ ಡ್ರೈ ಫ್ರೂಟ್ಸ್ ಸೇವನೆ ಮಾಡುವುದು ಆರೋಗ್ಯಕರ. ಆದರೆ ಮೆದುಳಿಗೆ ಸಂಬಂಧಿಸಿದಂತೆ ಕೆಲವೊಂದು ಡ್ರೈ ಫ್ರೂಟ್ಸ್ ಗಳನ್ನು ನಾವು ಆಯ್ಕೆ ಮಾಡಿ ತಿನ್ನಬೇಕಾಗುತ್ತದೆ.

ಯೆಸ್…ಡ್ರೈ ಫ್ರೂಟ್ಸ್ ನಲ್ಲಿಯೇ ಮೆದುಳಿಗೆ ಸಂಬಂಧ ಪಟ್ಟ ಫ್ರೂಟ್ಸ್ ಎಂದರೆ ಅದು ವಾಲ್ನಟ್ (ಅಕ್ರೋಟ್). ಮೆದುಳಿಗೆ ಸಂಬಂಧಿಸಿದಂತೆ ಇದು ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಅಕ್ರೋಟ್ ನ ಎಲೆ, ತೊಗಟೆ, ತಿರುಳು, ಕಾಂಡ, ಬೀಜ, ಬೀಜದಿಂದ ತೆಗೆದ ಎಣ್ಣೆ ಬಹಳ ಉಪಯುಕ್ತವಾದುದು. ಇದು ಜೀವಸತ್ವಗಳು ಹಾಗೂ ಅಧಿಕವಾದ ಖನಿಜ ಪದಾರ್ಥಗಳನ್ನು ಒಳಗೊಂಡಿದೆ. ಪ್ರೋಟೀನ್, ನಾರಿನಂಶ, ತಾಮ್ರ, ಪೋಲಿಕ್ ಆಸಿಡ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸತು, ಪಾಸ್ಫರಸ್, ಮ್ಯಾಂಗನೀಸ್, ಬಿ ಮತ್ತು ಇ ಜೀವಸತ್ವಗಳು ಇದರಲ್ಲಿ ವಿಶೇಷವಾಗಿವೆ.

ಅಕ್ರೋಟ್ ನ ಎಲೆಯನ್ನು  ಸೇವನೆಮಾಡುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಎಲೆ ಸಿಕ್ಕದಿದ್ದಾಗ ಅಕ್ರೋಟ್ ಅನ್ನು ಸೇವಿಸಬಹುದು.

ಅಕ್ರೋಟ್ ಬೀಜದ ಎಣ್ಣೆಯನ್ನು ಸೇವಿಸಿದರೆ ಭೇದಿಯ ರೂಪದಲ್ಲಿ ಮಲವಿಸರ್ಜನೆಯಾಗುತ್ತದೆ.

ಅಕ್ರೋಟ್ ಬೀಜದ ಎಣ್ಣೆಯ ಸೇವನೆಯಿಂದ ಜಂತುಹುಳುಗಳ ಉಪಟಳವನ್ನು ನಿವಾರಿಸಿಕೊಳ್ಳಬಹುದು.

ಹಾಲುಣಿಸುವ ತಾಯಂದಿರಿಗೆ ಹಾಲು ನಿಲ್ಲಿಸಲು ಇದರ ತೊಗಟೆಯ ಕಷಾಯ ಸೇವನೆಯಿಂದ ಹಾಲಿನ ಉತ್ಪತ್ತಿ ನಿಂತುಹೋಗುತ್ತದೆ.

ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು, ಇದರ ಹಣ್ಣಿನ ರಸ ಇಲ್ಲವೆ ಬೀಜದ ಭಾಗವನ್ನು ಸೇವಿಸಿ.

ಶರೀರಕ್ಕೆ ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸಿ ಶರೀರಕ್ಕೆ ಬಲವನ್ನು ಕೊಡುತ್ತದೆ, ಬೆಳವಣಿಗೆಗೆ ಸಹಾಯಕವಾಗುತ್ತದೆ.

ಶರೀರಕ್ಕೆ ಬೇಡದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಶರೀರಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್ ಉಳಿಸಿಕೊಳ್ಳುತ್ತದೆ. ಹಾಗಾಗಿ ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಇದರ ಸೇವನೆಯಿಂದ ಅನುಕೂಲವಾಗುತ್ತದೆ.

ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ಇ ಜೀವಸತ್ವ ಇರುವುದರಿಂದ ಕ್ಯಾನ್ಸರ್ ಸಮಸ್ಯೆ ಬರದಿರುವಂತೆ ಕಾಪಾಡುತ್ತದೆ.

ಒಮೇಗಾ 3 ಆಸಿಡ್ ಇರುವುದರಿಂದ ಜ್ಞಾಪಕಶಕ್ತಿ ಹಾಗೂ ಬುದ್ಧಿಶಕ್ತಿ ಜಾಸ್ತಿಯಾಗುತ್ತದೆ. ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಮೆದುಳಿಗೆ ಉತ್ತಮ ತ್ರಾಣಿಕ.

 

Related