ಎಲಚಿಹಣ್ಣಿನ ಉಪಯೋಗಗಳು ನಿಮಗೆ ಗೊತ್ತೇ?

ಎಲಚಿಹಣ್ಣಿನ ಉಪಯೋಗಗಳು ನಿಮಗೆ ಗೊತ್ತೇ?

ಭೂಮಿ ಮೇಲೆ ಸಾಮಾನ್ಯವಾಗಿ ವಿವಿಧ ರೀತಿಯ ಹಣ್ಣು ಹಂಪಲುಗಳು ಸಿಗುತ್ತವೆ. ಇನ್ನು ಸೀಸನ್ಗಳಲ್ಲಿ ದೊರೆಯುವಂತಹ ಹಣ್ಣುಗಳನ್ನು ನಾವು ಸೇವಿಸಲೇ ಬೇಕಾಗುತ್ತದೆ ಇದರಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಒದಗಿಸುತ್ತವೆ.

ಹೌದು ಡಿಸೆಂಬರ್ ಮತ್ತು ಜನವರಿ ಮಧ್ಯದಲ್ಲಿ ಸಿಗುವಂತಹ ಎಲಚಿಹಣ್ಣಿನ ಸೇವನೆಯೂ ನಮ್ಮ ಆರೋಗ್ಯಕ್ಕೆ ಉತ್ತಮವೆಂದು ವೈದ್ಯರು ತಿಳಿಸುತ್ತಾರೆ. ಎಲಚಿಹಣ್ಣು ಅಥವಾ ಬೋರೆಹಣ್ಣು ಎಂದು ಪ್ರಸಿದ್ಧಿಯನ್ನು ಹೊಂದಿರುವ ಈ ಹಣ್ಣಿನಲ್ಲಿ ವಿವಿಧ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನಾವಿಂದು ತಿಳಿಯೋಣ.

ಸಾಮಾನ್ಯವಾಗಿ ಋತುಮಾನ ಬದಲಾದಂತೆ ನಮ್ಮ ಆರೋಗ್ಯದಲ್ಲೂ ಸಹ ಬದಲಾವಣೆ ಕಂಡುಬರುತ್ತದೆ. ಅದರಲ್ಲೂ ಡಿಸೆಂಬರ್ ಮತ್ತು ಜನವರಿ ಮಧ್ಯದಲ್ಲಿ ನೆಗಡಿ, ಕೆಮ್ಮು, ಜ್ವರಗಳಂತ ಸಮಸ್ಯೆಗಳನ್ನು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಾರೆ.

ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ ಮನೆ ಮದ್ದು: ಎಲಚಿಹಣ್ಣನ್ನು ಚಚ್ಚಿ ಅದನ್ನು ಕುಕ್ಕರ್‌ನಲ್ಲಿ ಬೇಯಿಸಿ, ನೀರು ಹಾಕಬಾರದು. ಪಾತ್ರೆಯಲ್ಲಿ ಮುಚ್ಚಿಡಬೇಕು. ನಂತರ ತೆಗೆದು ರಸವನ್ನು ಶೋಧಿಸಿಕೊಂಡು ಸಕ್ಕರೆಯ ಪಾಕಮಾಡಿ, ಬೆರೆಸಬೇಕು. ಚಳಿಗಾಲದಲ್ಲಿ ಬರುವ ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ ಒಳ್ಳೆಯ ಔಷಧಿಯಾಗಿದೆ.

ಮೊಡವೆ ಸಮಸ್ಯೆಗೆ: ಎಲಚಿಹಣ್ಣನ ಬೀಜವನ್ನು ತೆಗೆದು ನೀರಿನಲ್ಲಿ ಅರೆದು ಮೊಡವೆಗೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ.

ಸುಟ್ಟಗಾಯಕ್ಕೆ: ಎಲಚಿಗಿಡದ ಎಳೆಯ ಕುಡಿಯನ್ನು ಅಥವಾ ಎಳೆಯ ಕಾಯಿಯನ್ನು ಮೊಸರಿನ ಜೊತೆಯಲ್ಲಿ ಅರೆದು ಹಚ್ಚಿದರೆ ಉರಿಯು ಕಡಿಮೆ ಆಗುತ್ತದೆ ಮತ್ತು ಸುಟ್ಟಗಾಯ ಮಾಯುತ್ತದೆ.

ಕೂದಲು ಬೆಳೆಯುವುದಕ್ಕೆ: ಎಲಚಿಗಿಡದ ಎಲೆ ಹಾಗೂ ಬೆಟ್ಟದ ನೆಲ್ಲಿಕಾಯಿಯೊಡನೆ ಅರೆದು ತಲೆಗೆ ಹಚ್ಚಿ ಸ್ನಾನಮಾಡಿದರೂ ಕೂಡ ಕೂದಲು ಸೊಂಪಾಗಿ ಬೆಳೆಯುತ್ತದೆ. ಎಲೆಯ ಜೊತೆಗೆ ಎಳ್ಳಿನ ಗಿಡದ ಎಲೆಯನ್ನು ಉಪಯೋಗಿಸಬಹುದು.

ಬಿಳಿಕೂದಲು ಕಪ್ಪಾಗುವುದಕ್ಕೆ: ಈ ಗಿಡದ ಹಸಿಯ ಚಕ್ಕೆ, ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಗುರುಗ ಸೊಪ್ಪು ಎಲ್ಲವನ್ನೂ ಸಮವಾಗಿ ತಂದು ಅರೆದು ಕಬ್ಬಿನ ರಸದಲ್ಲಿ ಸೇರಿಸಿ ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟು ಒಂದು ತಿಂಗಳು ತೆಗೆಯಬಾರದು. ಗಾಳಿ ಆಡಬಾರದು ನಂತರ, ತೆಗೆದು ತಲೆಗೆ ಹಚ್ಚಿ ಸ್ನಾನ ಮಾಡುತ್ತಾ ಇದ್ದರೆ ಬಿಳಿಕೂದಲು ಕಪ್ಪಾಗುತ್ತದೆ.

 

Related