ಮೂಲಂಗಿ ಎಲೆ ತತ್ವ ನಿಮಗೆ ಗೊತ್ತಾ?!

ಮೂಲಂಗಿ ಎಲೆ ತತ್ವ ನಿಮಗೆ ಗೊತ್ತಾ?!

ಸಾಮಾನ್ಯವಾಗಿ ನಾವೆಲ್ಲರೂ ಮೂಲಂಗಿಯನ್ನು ಬಳಸುತ್ತೇವೆ. ಮೂಲಂಗಿಯಿಂದ, ಮೂಲಂಗಿ ಸಾಂಬಾರ್, ಮೂಲಂಗಿ ಪಚಡಿ ಇನ್ನಿತರ ವಿಧವಿಧ ರೀತಿಯಲ್ಲಿ ನಾವು ಮೂಲಂಗಿ ಸೇವನೆ ಮಾಡುತ್ತೇವೆ. ಆದರೆ ನಾವು ಕೇವಲ ಮೂಲಂಗಿಯನ್ನು ಮಾತ್ರ ಬಳಸಿ ಮೂಲಂಗಿಯ ಸೊಪ್ಪನ್ನು ಬಿಸಾಕುತ್ತೇವೆ.

ಹೌದು, ನಾವು ಕೇವಲ ಮೂಲಂಗಿಯನ್ನು ಮಾತ್ರ ಉಪಯೋಗಿಸುತ್ತೇವೆ. ಆದರೆ ಮೂಲಂಗಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ನಿಮಗೆ ಗೊತ್ತಾದರೆ ಇನ್ನು ಮುಂದೆ ಯಾವತ್ತೂ ಮೂಲಂಗಿ ಸೊಪ್ಪನ್ನು ಬಿಸಾಕುವುದಿಲ್ಲ.

ಮೂಲಂಗಿ ಜೊತೆ ಮೂಲಂಗಿ ಸೊಪ್ಪನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ವೈದ್ಯರು ತಿಳಿಸುತ್ತಾರೆ

ಮೂಲಂಗಿ ಎಲೆಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ಲಿವರ್, ಸ್ತನ, ಗರ್ಭಕಂಠ, ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನ ವಿರುದ್ಧ ಹೋರಾಡುತ್ತದೆ.

ಇದರ ಎಲೆಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ಫ್ರಿ ರಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಅಂಗಾಂಶಗಳ ಮೇಲೆ ಅವುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

ಮೂಲಂಗಿ ಎಲೆಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಮೂಲಂಗಿ ಎಲೆಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಮುಲ್ಲಂಗಿ ಎಲೆಗಳನ್ನು ಎಚ್ಚರಿಕೆಯಿಂದ ಆಹಾರದಲ್ಲಿ ಸೇರಿಸಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ.

ಮೂಲಂಗಿ ಮಧುಮೇಹಿಗಳಿಗೆ ಉತ್ತಮ ಆಹಾರದ ಆಯ್ಕೆಯಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೂಲಂಗಿ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

Related