ಇಸ್ರೇಲ್ ಗೂ ತಲುಪಿತ ಮಂಕಿ ಪಾಕ್ಸ್.!!

ಜಗತ್ತಿನಾದ್ಯಂತ ಕೋವಿಡ್ (Covid) ಸೋಂಕಿನ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹೀಗಿರುವಾಗ ಮತ್ತೊಂದು ಗಂಭೀರ ಸಮಸ್ಯೆ ಆವರಿಸುವ ಆತಂಕ ಎದುರಾಗಿದೆ. ಅತಿ ಅಪರೂಪದ ಸೋಂಕಾದ ಮಂಕಿಪಾಕ್ಸ್ ವೈರಸ್ (Monkeypox virus) ಒಂದೊಂದೇ ದೇಶಕ್ಕೆ ಲಗ್ಗೆಯಿಡುತ್ತಿದೆ. ಈಗ, ಇಸ್ರೇಲ್ ಕೂಡ ವಿದೇಶದಿಂದ ಹಿಂದಿರುಗಿದ ವ್ಯಕ್ತಿಯಲ್ಲಿ ವೈರಸ್ ಸೋಂಕಿನ ಮೊದಲ ಪ್ರಕರಣವನ್ನು ದೃಢಪಡಿಸಿದೆ.


ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳು ಎಚ್ಚರಿಕೆಯ ಗಂಟೆಗಳನ್ನು ಬಾರಿಸುತ್ತಿವೆ. ಈಗ, ಇಸ್ರೇಲ್ ಕೂಡ ವಿದೇಶದಿಂದ ಹಿಂದಿರುಗಿದ ವ್ಯಕ್ತಿಯಲ್ಲಿ ಸೋಂಕಿನ ಮೊದಲ ಪ್ರಕರಣವನ್ನು ದೃಢಪಡಿಸಿದೆ. ಜಾಗತಿಕ ಮಂಕಿಪಾಕ್ಸ್ ಪರಿಸ್ಥಿತಿಯು ಕಳವಳಿ ಪಡಬೇಕಾದ ವಿಷಯವಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಶನಿವಾರದ ಹೊತ್ತಿಗೆ, ವಿಶ್ವ ಆರೋಗ್ಯ ಸಂಸ್ಥೆಯು (WHO) ವೈರಸ್ಗೆ ಸ್ಥಳೀಯವಲ್ಲದ 12 ಸದಸ್ಯ ರಾಷ್ಟ್ರಗಳಿಂದ 92 ದೃಢಪಡಿಸಿದ ಪ್ರಕರಣಗಳು ಮತ್ತು 28 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ವ್ಯಕ್ತಿಯನ್ನು ಟೆಲ್ ಅವಿವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜ್ವರ ಮತ್ತು ಗಾಯಗಳೊಂದಿಗೆ ವಿದೇಶದಿಂದ ಹಿಂದಿರುಗಿದ ಎಲ್ಲರಿಗೂ ವೈದ್ಯರನ್ನು ಭೇಟಿ ಮಾಡುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

Related