ಸಿಎಂ ಮತ್ತು ಗೃಹ ಸಚಿವರು ಬಳೆ ತೊಟ್ಟಿದ್ದಾರೆಯೇ: ವಿಜಯೇಂದ್ರ

ಸಿಎಂ ಮತ್ತು ಗೃಹ ಸಚಿವರು ಬಳೆ ತೊಟ್ಟಿದ್ದಾರೆಯೇ: ವಿಜಯೇಂದ್ರ

ಮೈಸೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಹಿಂದುಗಳ ಮೇಲೆ ದಬ್ಬಾಳಿಕೆ, ಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದರು ಕೂಡ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಏನು ಬಳೆ ತೊಟ್ಟುಕೊಂಡು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ನಗರದಲೆಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನ ಹತ್ಯೆ ಮಾಡಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂದೂಗಳ ಹತ್ಯೆಯಾಗ್ತಿದ್ದರೂ ಸರ್ಕಾರ ಏನು ಮಾಡದ ಸ್ಥಿತಿಯಲ್ಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಏನು ಬಳೆ ತೊಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಮೊದಲು ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಬೇಕು. ಜಿಹಾದಿಗಳಿಗೆ, ಕೊಲೆ ಮಾಡುವ ಪುಂಡರಿಗೆ ಭಯವೇ ಇಲ್ಲದಂತೆ ಆಗಿದೆ. ಈ ಕೊಲೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂಬುದು ಗೊತ್ತಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಸಿಎಂಗೆ ಒಳ್ಳೆಯ ಬುದ್ಧಿ ಕೊಡು ಅಂತಾ ಚಾಮುಂಡಿ ತಾಯಿಗೆ ಬೇಡಿಕೊಳ್ತೇನೆ. ಹಿಂದುಗಳ ಹತ್ಯೆ ನಿಲ್ಲಿಸುವ ಮನಸ್ಸು ಕೊಡು ಎಂದು ಬೇಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

 

Related