ಅರ್ಜುನನ ಸಮಾಧಿ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ

ಅರ್ಜುನನ ಸಮಾಧಿ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ

ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾ ಅಂಬರಿಯನ್ನು ಹೊರುತ್ತಿದ್ದ ಅರ್ಜುನನ ಸಮಾಧಿಗೆ ಈಗ ಅರಣ್ಯ ಇಲಾಖೆ ಸಮಾಧಿಯನ್ನು ರಕ್ಷಣೆ ಮಾಡಲು ಮುಂದಾಗಿದೆ.

ಈಗಾಗಲೇ ಅರಣ್ಯ ಇಲಾಖೆಯಿಂದಲೇ ಅನುಮತಿ ಪಡೆದು ಅರ್ಜುನನ ಸಮಾಧಿ ಕಟ್ಟಲು ಎಲ್ಲ ರೀತಿ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನು ನಟ ದರ್ಶನ್ ಅವರ ಆಪ್ತ ಒಬ್ಬರು ಆನೆ ಅರ್ಜುನ ಸಮಾಧಿ ಕಟ್ಟಲು ಸುಮಾರು 30 ಸಾವಿರ ರೂಪಾಯಿ ನೀಡಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇದನ್ನೂ ಓದಿ: ಡಿಸಿಎಂ ಭೇಟಿಯಾದ ಕೆಎಲ್​ಇ ಸೊಸೈಟಿ ಅಧ್ಯಕ್ಷ

ಮಳೆಗಾಲದಲ್ಲಿ ಕಾಡಿನಲ್ಲಿ ಹೆಚ್ಚು ಮಳೆ ಬೀಳುವ ಕಾರಣ ಅರ್ಜುನನ ಸಮಾಧಿ ಹಾಳಾಗುತ್ತದೆ. ಆದ ಕಾರಣ ಅರ್ಜುನನ ಸಮಾಧಿ ಹಾಳಾಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆಯಿಂದ ಸಮಾಧಿಯನ್ನು ನಿರ್ಮಿಸಲು ಮುಂದಾಗಿದ್ದಾರೆ.

ಇನ್ನು ನಿನ್ನೆ(ಮೇ.22) ನಟ ದರ್ಶನ್ ಅಭಿಮಾನಿಗಳು 30 ಸಾವಿರ ರೂ. ಮೌಲ್ಯದ ಕಲ್ಲುಗಳನ್ನು ಕಳಿಸಿದ್ದರು.  ಅರಣ್ಯ ಇಲಾಖೆ ಅನುಮತಿ ಪಡೆಯದೆ ಸ್ಮಾರಕ ನಿರ್ಮಾಣಕ್ಕೆ ಕಲ್ಲುಗಳ ಕಳಿಸಿದ್ದ ಹಿನ್ನಲೆ ಕಲ್ಲುಗಳಿಗೆ ನೀಡಿದ್ದ 30 ಸಾವಿರ ರೂಪಾಯಿಯನ್ನ ದರ್ಶನ್ ಆಪ್ತ ನವೀನ್ ಎಂಬುವವರ ಅಕೌಂಟ್​ಗೆ  ಪುನಃ ಅರಣ್ಯ ಇಲಾಖೆ ಆರ್​ಎಫ್​ಓ ಫೋನ್ ಪೇ ಮಾಡಿದ್ದಾರೆ.

ಇನ್ನು ಜನರು ಬಂದು ಹೋಗುವ ಸ್ಥಳದಲ್ಲಿ‌ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ‌ ಕೂಡ ಕಳಿಸಿದೆ. ಈ ನಡುವೆ ಮಳೆ ಆರಂಭ ಹಿನ್ನೆಲೆಯಲ್ಲಿ ಸಮಾಧಿ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಇತ್ತ 25 ಕ್ಕೂ ಹೆಚ್ಚು ಸಿಬ್ಬಂದಿ ಶ್ರಮದಾನದ ಮೂಲಕ ಸಮಾಧಿ ರಕ್ಷಣಾ ಕಾರ್ಯ ಮುಂದುವರೆದಿದೆ. ಖುದ್ದು ಎಸಿಎಫ್ ಮಹದೇವ್, ವಲಯ ಅರಣ್ಯ ಅಧಿಕಾರಿ ಅಮ್ರೇಕರ್ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಮಳೆಯಿಂದ‌ ಅರ್ಜುನನ ಸಮಾಧಿಗೆ ಯಾವುದೇ ಹಾನಿಯಾಗದಂತೆ ನಿಗಾವಹಿಸಲಾಗಿದೆ.

Related