ಡಿಸಿಎಂ ಭೇಟಿಯಾದ ಕೆಎಲ್​ಇ ಸೊಸೈಟಿ ಅಧ್ಯಕ್ಷ

ಡಿಸಿಎಂ ಭೇಟಿಯಾದ ಕೆಎಲ್​ಇ ಸೊಸೈಟಿ ಅಧ್ಯಕ್ಷ

ಬೆಂಗಳೂರು: ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ನಾಯಕರುಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕುತೂಹವನ್ನು ಮೂಡಿಸುತ್ತಿದ್ದಾರೆ.

ಹೌದು, ಬಿಜೆಪಿ ನಾಯಕರುಗಳು ಇತ್ತೀಚಿಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ ಸಂಚಲನವನ ಸೃಷ್ಟಿಯಾಗುತ್ತಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬಾಂಬ್ ಬೆದರಿಕೆ ಸದ್ದು

ಇಂದು ಬೆಳಗಾವಿ ಕೆಎಲ್ ಇ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಪ್ರಭಾಕರ್ ಕೋರೆ  ಇಂದು ಶಿವಕುಮಾರ್ ಅವರನ್ನು ಭೇಟಿಯಾದರು. ಕಾರಣ ನಮಗೆ ಗೊತ್ತಾಗಲು ಸಾಧ್ಯವೂ ಇಲ್ಲ. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಕೆಎಲ್ ಈ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಅಧೀನದಲ್ಲಿ 282 ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿವೆ. ಕೋರೆ ಅವರು ಕೆಎಲ್ ಈ ಸೊಸೈಟಿಯ ಅಧ್ಯಕ್ಷನಾಗಿರುವ ಜೊತೆಗೆ ಹುಬ್ಬಳ್ಳಿಯ ಕೆಎಲ್ ಈ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿಗಳೂ ಆಗಿದ್ದಾರೆ.

Related