ಮೀನಿನ ದರ ಇಳಿಕೆ

ಮೀನಿನ ದರ ಇಳಿಕೆ

ಹುಬ್ಬಳ್ಳಿ : ಸಮುದ್ರ ಮೀನುಗಳ ದರ ಇಳಿದಿದೆ. ಎರಡು ವಾರದ ಹಿಂದೆ ಇದ್ದ ದರದ ಅರ್ಧದಷ್ಟಾಗಿರುವುದು ಮೀನು ಪ್ರಿಯರಿಗೆ ಖುಷಿ ತಂದಿದೆ.
ಕರಾವಳಿಯಲ್ಲಿ ಮಳೆ ತಗ್ಗಿದ ಕಾರಣ ಸಮುದ್ರ ಮೀನುಗಾರಿಕೆ ಚುರುಕು ಪಡೆದಿದೆ. ಇದರಿಂದಾಗಿ ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯಲ್ಲಿ ಈಗ ಸಮುದ್ರದ ಬಗೆ, ಬಗೆಯ ಮೀನುಗಳದ್ದೇ ಸುಗ್ಗಿ.

ಜೂನ್-ಜುಲೈನಲ್ಲಿ ಜಾರಿಯಲ್ಲಿದ್ದ ಆಳಸಮುದ್ರ ಮೀನುಗಾರಿಕೆ ಆ.1ರಂದು ತೆರೆವುಗೊಂಡಿದ್ದರೂ, ಜೋರು ಮಳೆ-ಗಾಳಿ, ಸಮುದ್ರ ಅಲೆಗಳ ಅಬ್ಬರದಿಂದ ಚುರುಕು ಪಡೆದಿರಲಿಲ್ಲ.

Related