ಲೋಕ ಸಮರಕ್ಕೆ ನಾಳೆ ದಿನಾಂಕ ನಿಗದಿ

ಲೋಕ ಸಮರಕ್ಕೆ ನಾಳೆ ದಿನಾಂಕ ನಿಗದಿ

ನವದೆಹಲಿ: ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾ‌ರ್ ಅವರು ಲೋಕ ಸಮರದ ಮುಹೂರ್ತದ ಘೋಷಣೆ ಮಾಡಲಿದ್ದು, ಚುನಾವಣೆ ದಿನಾಂಕ ಘೋಷಣೆ ನಂತರ ಚುನಾವಣಾ ಕಾವು ಮತ್ತಷ್ಟು ಏರಲಿದೆ. ಲೋಕಸಭಾ ಚುನಾವಣೆಗೆ ದೇಶದ ವಿವಿಧೆಡೆ ಹಲವು ಹಂತಗಳಲ್ಲಿ ಮತದಾನವನ್ನು ಚುನಾವಣಾ ಆಯೋಗ ನಡೆಸುವ ಸಾಧ್ಯತೆ ಇದ್ದು, 6-7 ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಮಾಡಲಿದೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಬಿಜೆಪಿ ಮತ್ತು
ಕಾಂಗ್ರೆಸ್ ಪಕ್ಷಗಳು ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಎಲ್ಲ ಪಕ್ಷಗಳಲ್ಲೂ ಚುನಾವಣಾ ತಯಾರಿ ಬಿರುಸಿನಿಂದ ನಡೆದಿದೆ. ನಾಳೆ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ನಿಗದಿ
ಮಾಡುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಮತ್ತಷ್ಟು ಬಿರುಸಾಗಲಿವೆ.

Related