ಎನ್​ಡಿಎ ಮೈತ್ರಿಕೂಟದಿಂದ ದೂರ ಉಳಿಯಲು ದಳಪತಿಗಳು ತೀರ್ಮಾನಿ!

ಎನ್​ಡಿಎ ಮೈತ್ರಿಕೂಟದಿಂದ ದೂರ ಉಳಿಯಲು ದಳಪತಿಗಳು ತೀರ್ಮಾನಿ!

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಜೆಡಿಎಸ್ ಪಕ್ಷವು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಹಲವಾರು ಸುದ್ದಿಗಳು ಹೊರ ಬಿದ್ದಿತ್ತು. ಆದರೆ ಈಗ ಮೈತ್ರಿಕೂಟ ಬೇಡ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ತಿಳಿಸಿದ್ದಾರೆ

ಹೌದು, ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ ಶಾಸಕರಲ್ಲಿಒಮ್ಮತ ಮೂಡಿ ಬಾರದ ಹಿನ್ನೆಲೆಯಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಸದ್ಯಕ್ಕೆ ದೂರ ಉಳಿಯಲು ದಳಪತಿಗಳು ತೀರ್ಮಾನಿಸಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನಲ್ಲಿನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಒಪ್ಪಂದ ರಾಜಕೀಯ ಬೇಡ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರಿಂದ ಮುಂದಿನ ರಾಜಕೀಯ ಭವಿಷ್ಯದಿಂದ ಯಾರ ಜೊತೆ ಮೈತಿ ಬೇಡ ಎಂದು ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೆಗೌಡ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಾವು ಯಾರ ಜೊತೆ‌ ಒಪ್ಪಂದ ಮಾಡಿಕೊಳ್ಳೊದು ಬೇಡ. ಸ್ವತಂತ್ರವಾಗಿ ಚುನಾವಣೆಯಲ್ಲಿ ಹೋರಾಟ ಮಾಡೋಣ. ಒಪ್ಪಂದ ಮಾಡಿಕೊಂಡರೆ ಲೋಕಸಭಾ ಚುನಾವಣೆಗೆ ಬೇರೆಯ ಸಂದೇಶ ರವಾನೆ ಆಗುತ್ತದೆ. ಮೈತ್ರಿ ಕೂಟಕ್ಕೆ ಸೇರಿದರೆ ಕೆಲ ಸಮುದಾಯಗಳ ನೇರ ನೇರ ವಿರೋಧ ಕಟ್ಟಿಕೊಳ್ಳಬೇಕು. ಅದು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಷ್ಟವಾಗುತ್ತದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು. ಹೀಗಾಗಿ ಮೈತ್ರಿಯ ವಿಚಾರವಾಗಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.

 

Related