ಕೊರೊನಾ ಸಂಕಷ್ಟದಲ್ಲಿದ್ದವರ ನೆರವಿಗೆ ದಾವಿಸಿದ ಡಿ.ಬಾಸ್ ಪ್ಯಾನ್ಸ

  • In State
  • April 1, 2020
  • 487 Views
ಕೊರೊನಾ ಸಂಕಷ್ಟದಲ್ಲಿದ್ದವರ ನೆರವಿಗೆ ದಾವಿಸಿದ ಡಿ.ಬಾಸ್ ಪ್ಯಾನ್ಸ

ಗಜೇಂದ್ರಗಡ, ಏ. 01: ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಹಸಿದವರಿಗೆ ನೆರವು ನೀಡಲು ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮುಂದೆ ಬಂದಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತು ಹಸಿದವರಿಗೆ ಊಟದ ವ್ಯವಸ್ತೆಯನ್ನು ಗಜೇಂದ್ರಗಡದ   ಡಿಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ.  ಈ ಮೂಲಕ ಡಿಬಾಸ್ ಅಭಿಮಾನಿಗಳು  ಹಸಿದವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಇದರ ಜೊತೆಗೆ ಈ ಲಾಕ್‍ಡೌನ್ ಮುಗಿಯುವವರೆಗೂ ಇದೇ ರೀತಿ ಮಾಡಲು ನಿರ್ಧರಿಸಿರುವ ದರ್ಶನ್ ಅಭಿಮಾನಿಗಳು, ಸರ್ಕಾರದ ಆದೇಶದಂತೆ ಲಾಕ್ ಡೌನ್ ಮುಗಿಯುವ ತನಕ ಸಹಾಯ ಮಾಡಲು ಗಜೇಂದ್ರಗಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘ ತೀರ್ಮಾನಿಸಿದೆ ಎಂದರು. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆವಾದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕೂಡ ಮನವಿ ಮಾಡಲಾಗಿದೆ.

ಬಳಿಕ ಉಪಾಧ್ಯಕ್ಷ ಜಿಲಾಜಿ ಎಮ್.ಖಾಜಿ ಮಾತನಾಡಿ, ನಗರದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಕೂಲಿನಾಲಿಗಾಗಿ ಗಜೇಂದ್ರಗಡ ಪಟ್ಟಣಕ್ಕೆ  ಬಂದು ಹೊರಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣ, ರಸ್ತೆಬದಿಯಲ್ಲಿ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರಿಗೆ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮಾಡಲಾಯಿತು ಎಂದು ತಿಳಿಸಿದ್ದರು. ನಂತರ  ಅಧ್ಯಕ್ಷ ಸೋಹಿಲ್ ಮುದ್ದೋಳ ಮಾತನಾಡಿದರು, ಇದೇ ಸಂದರ್ಭದಲ್ಲಿ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ  ಡಿ ಬಾಸ ಅಭಿಮಾನಿಗಳು ಹಾಜರಿದ್ದರು.

Related