ಸಿಲಿಂಡರ್ ಸ್ಪೋಟ : 14 ಮಂದಿಗೆ ಗಂಭೀರ ಗಾಯ

ಸಿಲಿಂಡರ್ ಸ್ಪೋಟ : 14 ಮಂದಿಗೆ ಗಂಭೀರ ಗಾಯ

ಮಹಾರಾಷ್ಟ್ರ : ರಾಜ್ಯದ ಮುಂಬೈನ ಧಾರಾವಿಯಲ್ಲಿ ಅವಘಟವೊಂದು ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ ಆಗಿದ್ದರಿಂದಾಗಿ 14ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರೋದಾಗಿ ಭಾನುವಾರ ತಿಳಿದು ಬಂದಿದೆ. 14ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರೋದಾಗಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡಿರುವಂತ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Related