ಕಾರ್ಪೊರೇಟರ್ಗಳು ಬೆಳ್ಳಂಬೆಳ್ಳಗೆ ಕ್ರಿಕೆಟ್

ಕಾರ್ಪೊರೇಟರ್ಗಳು ಬೆಳ್ಳಂಬೆಳ್ಳಗೆ ಕ್ರಿಕೆಟ್

ಬೆಂಗಳೂರು,ಫೆ. 11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ಗಳು ಇಂದು ಕ್ರಿಕೆಟ್ ಮೂಡ್ನಲ್ಲಿದ್ದಾರೆ. ನಗರದ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ಜನಪ್ರತಿನಿಧಿಗಳು ಕ್ರಿಕೆಟ್ ಅಭ್ಯಾಸ ಪಂದ್ಯದಲ್ಲಿ ಬ್ಯುಸಿಯಾಗಿದ್ದರು. ಕೆಂಪೇಗೌಡ ಜಯಂತಿ ಅಂಗವಾಗಿ ಕಾರ್ಪೊರೇಟರ್ ಹಾಗೂ ಅಧಿಕಾರಿಗಳ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ಅಭ್ಯಾಸ ಪಂದ್ಯ ನಡೆಯಲಿದೆ.
ಬೆಳ್ಳಂಬೆಳ್ಳಗೆ ಕಾರ್ಪೊರೇಟರ್ಗಳು ಬ್ಯಾಟ್, ಬಾಲ್ ಹಿಡಿದು ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದಾರೆ.ಕಾರ್ಪೊರೇಟರ್ಗಳಾದ ಮೋಹನ್ ಕುಮಾರ್, ವಿರೋಧ ಪಕ್ಷ ನಾಯಕ ಅಬ್ದುಲ್ ವಾಜೀದ್, ಜಯಪಾಲ್, ದಾಸೇಗೌಡ ನಾಯಕ್ ಸೇರಿದಂತೆ ಹಲವು ಕಾರ್ಪೊರೇಟರ್ಗಳು ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದರು.

Related