ಕೊರೋನಾ ಎಚ್ಚರಿಕೆ ನೀಡಿದ್ದ ವೈದ್ಯ ಬಲಿ

ಕೊರೋನಾ ಎಚ್ಚರಿಕೆ ನೀಡಿದ್ದ ವೈದ್ಯ ಬಲಿ

ಬೀಜಿಂಗ್ , ಫೆ. 07 : ಕೊರೋನಾ ವೈರಸ್ ಬಗ್ಗೆ ತಿಳಿದಿದ್ದ ಲೀ ವೆನ್ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದರು. ಚೀನಾದಲ್ಲಿ ಸಾರ್ಸ್ ರೀತಿಯ ಕೊರೋನಾ ವೈರಸ್ ಹಬ್ಬುತ್ತಿದೆ ಎಂದು ಪೊಲೀಸರು ಹಾಗೂ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದ ಲೀ ವೆನ್ ಲಿಯಾಂಗ್ ಎಂಬ ವೈದ್ಯ ಕೊರೋನಾ ವೈರಸ್’ಗೆ ಬಲಿಯಾಗಿದ್ದಾರೆ.
ಲೀ ವೆನ್ ಸಾವಿನ ಬಳಿಗ ಜಾಗತಿಕವಾಗಿ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಲೀ ಸಾವನ್ನಪ್ಪಿಲ್ಲ. ಅವರ ಹೃದಯ ಬಡಿತ ನಿಂತಿದೆಯಷ್ಟೇ. ಚಿಕಿತ್ಸೆ ಮುಂದುವರೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ವುಹಾನ್ ನಲ್ಲಿ ವೈರಸ್ ಹರಡುತ್ತಿರುವ ಎಚ್ಚರಿಕೆಯನ್ನು ಲೀ ನೀಡಿದ್ದರು.
ಕೆಲವರಲ್ಲಿ ಕಂಡು ಬಂದಿರುವ ವೈರಸ್ ಕೊರೋನಾ ವೈರಸ್ ಆಗಿದ್ದು, ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದ್ದು, ಸಾರ್ಸ್ ರೀತಿಯಲ್ಲಿಯೇ ಹಲವರಿಗೆ ಹರಡುವ ಸಾಧ್ಯತೆಗಳಿವೆ ಎಂದು ಹೇಳಿದ್ದರು.

Related