ಕೊರೊನಾ :ಬಣಗುಡುತ್ತಿರುವ ಹೋಟೆಲ್ಗಳು!

ಕೊರೊನಾ :ಬಣಗುಡುತ್ತಿರುವ ಹೋಟೆಲ್ಗಳು!

ಬೆಂಗಳೂರು, ಮಾ. 12 : ಕೊರೊನಾ ವೈರಸ್ ಭೀತಿಯಿಂದ ಬೆಂಗಳೂರಿನಲ್ಲಿರುವ 380 ಸ್ಟಾರ್ ಹೋಟೆಲ್ಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕೊಠಡಿಗಳು ಖಾಲಿ ಬಿದ್ದಿವೆ. ಗ್ರಾಹಕರು ಮತ್ತು ಅತಿಥಿಗಳಿಲ್ಲದೆ ಹೋಟೆಲ್ಗಳಷ್ಟೇ ಅಲ್ಲ; ಇಡೀ ಆತಿಥ್ಯ ಕ್ಷೇತ್ರವೇ ಕಂಪಿಸುತ್ತಿದೆ. ಕೋಟ್ಯಂತರ ಆದಾಯಕ್ಕೆ ಕಲ್ಲುಬಿದ್ದಿದೆ. ಜಾಗತಿಕ ನಗರವಾಗಿರುವ ಬೆಂಗಳೂರಿನಲ್ಲಿ ನಾಲ್ವರಲ್ಲಿಮಾತ್ರ ಕೊರೊನಾ ದೃಢಪಟ್ಟಿದೆ. ಆದರೆ, ತೀವ್ರತೆ ಮಾತ್ರ ಅತ್ಯಂತ ಭೀಕರವಾಗಿ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತಿದೆ.

ಐಟಿ-ಬಿಟಿ ಕಂಪನಿಗಳು, ಸ್ಟಾರ್ಟಪ್ಗಳು, ಜಾಗತಿಕ ಕಂಪನಿಗಳು ತಮ್ಮ ಶಾಖೆಗಳನ್ನು ಬೆಂಗಳೂರಿನಲ್ಲಿಹೊಂದಿವೆ. ಹೀಗಾಗಿ, ದೇಶ-ವಿದೇಶಗಳಿಂದ ನಿರಂತರವಾಗಿ ಪ್ರಯಾಣಿಕರು ಬೆಂಗಳೂರಿಗೆ ಬರುತ್ತಿರುತ್ತಾರೆ. ಒಂದೆರಡು ದಿನಗಳಿಂದ ಹಿಡಿದು ವಾರದವರೆಗೂ ಹೋಟೆಲ್ಗಳಲ್ಲಿವಾಸ್ತವ್ಯ ಹೂಡುತ್ತಾರೆ. ಹೀಗಾಗಿ, ನಗರದ ಬಹುತೇಕ ಭಾಗಗಳಲ್ಲಿಸ್ಟಾರ್ ಹೋಟೆಲ್ಗಳು ತಲೆಯೆತ್ತಿವೆ.”ನಗರದಲ್ಲಿ 3 ಸ್ಟಾರ್, 4 ಸ್ಟಾರ್ ಮತ್ತು 5 ಸ್ಟಾರ್ ದರ್ಜೆಯ 380 ಹೋಟೆಲ್ಗಳಿವೆ. ಪ್ರತಿ ಹೋಟೆಲ್ನಲ್ಲಿ ಕನಿಷ್ಟ 50ರಿಂದ 70 ಮೇಲ್ಪಟ್ಟು ಕೊಠಡಿಗಳಿವೆ. ಕೆಲವೊಂದು ಹೋಟೆಲ್ಗಳಲ್ಲಿ ನೂರಕ್ಕೂ ಮೇಲ್ಪಟ್ಟು ಕೊಠಡಿಗಳಿವೆ. ಯಾವುದೇ ಸೀಸನ್ ಇದ್ದರೂ ಕೊಠಡಿಗಳ ಬುಕ್ಕಿಂಗ್ ಕಡಿಮೆ ಆಗುತ್ತಿರಲಿಲ್ಲ., ನಾಗರಿಕರು ಪ್ರಾರ್ಥನೆ ಮಾಡುತ್ತಿದ್ದಾರೆ.

Related