ಕೊರೋನಾ ರಣಕೇಕೆ

ಕೊರೋನಾ ರಣಕೇಕೆ

ನವದೆಹಲಿ :  ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,45,380ಕ್ಕೇರಿದ್ದು ಅವರಲ್ಲಿ 80,722 ಸಕ್ರಿಯ ಕೇಸುಗಳು ಮತ್ತು 60 ಸಾವಿರದ 490 ಗುಣಮುಖ ಹೊಂದಿದ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕೇಸುಗಳಾಗಿವೆ. ಇದುವರೆಗೆ ಕೊರೋನಾ ಸೋಂಕಿನಿಂದ ದೇಶದಲ್ಲಿ 4 ಸಾವಿರದ 167 ಸಾವು ಸಂಭವಿಸಿದೆ.

ಎರಡು ತಿಂಗಳ ನಂತರ ದೇಶೀಯ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು. ದೇಶೀಯ ವಿಮಾನಗಳ ಹಾರಾಟದ ವೇಳೆ ಅನೇಕ ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆಗಳು, ಅಡಚಣೆಗಳು ಕಂಡುಬಂದವು. ನಿನ್ನೆ ಆರಂಭವಾದ ದಿನವೇ 630 ವಿಮಾನಗಳ ಹಾರಾಟ ಕೊನೆ ಕ್ಷಣದಲ್ಲಿ ರದ್ದಾಗಿದ್ದು ಪ್ರಯಾಣಿಕರಿಗೆ ತೀವ್ರ ತೊಂದರೆಯನ್ನುಂಟುಮಾಡಿತು.

ಇನ್ನೊಂದೆಡೆ ಇಂದು ಕಳೆದ 24 ಗಂಟೆಗಳಲ್ಲಿ 146 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, 6 ಸಾವಿರದ 535 ಹೊಸ ಕೇಸುಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Related