ಸಮಾಜಕ್ಕೆ ತಿಳಿಹೇಳಬೇಕಾದ ಸಚಿವರೇ ಮೈಮರೆತರೆ ಹೇಗೆ? ಪುಟ್ಟರಾಜು ಪ್ರಶ್ನೆ

ಸಮಾಜಕ್ಕೆ ತಿಳಿಹೇಳಬೇಕಾದ ಸಚಿವರೇ ಮೈಮರೆತರೆ ಹೇಗೆ? ಪುಟ್ಟರಾಜು ಪ್ರಶ್ನೆ

ಮಂಡ್ಯ: ಕೋವಿಡ್-19 ಆತಂಕಕ್ಕೆ ಕಾರಣ ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವೇ ಕಾರಣ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.

ಸಮಾಜಕ್ಕೆ ತಿಳಿಹೇಳಬೇಕಾದ ಸಚಿವರೇ ಮೈಮರೆತರೆ ಇನ್ನು ಜನಸಾಮಾನ್ಯರ ಪಾಡು ಏನು ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಖಾಸಗಿ ವಾಹಿನಿ ಕ್ಯಾಮರಾಮೆನ್ ಗೆ ಕೊರೋನಾ ಪಾಸಿಟಿವ್ ಬಂದಿದೆ. ಕ್ಯಾಮರಾಮೆನ್ ಸಂರ‍್ಕ ಮಾಡಿದ್ದ ಸಚಿವರಾದ ಬೊಮ್ಮಾಯಿ, ಸುಧಾಕರ್, ಸೋಮಣ್ಣ, ಅಶ್ವತ್ ನಾರಾಯಣ, ಶ್ರೀರಾಮುಲು ಸೇರಿ ಐದು ಮಂದಿಯನ್ನು ಕ್ವಾರೆಂಟೈನ್ ಮಾಡಿ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಕ್ಯಾಬಿನೆಟ್ ಸಭೆಗೆ ಬರಬಾರದೆಂದು ಮುಖ್ಯಮಂತ್ರಿಗಳು ಸಹ ಹೇಳಿದ್ದಾರೆ. ಆದರೆ ಸಚಿವ ಡಾ.ಸುಧಾಕರ್ ಮಂಡ್ಯದಲ್ಲಿ ಸಭೆ ನಡೆಸಿದ್ದಾರೆ. ಬುಧವಾರ ನಡೆದ ಕಾರ್ಯಕ್ರಮಕ್ಕೆ 130 ಜನರಿಗೆ ಅಸನದ ವ್ಯವಸ್ಥೆ ಇತ್ತು. ಆದರೆ ಅಲ್ಲಿ 300ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮ್‌ಕ್ವಾರಂಟೈನ್‌ನಲ್ಲಿರಬೇಕಾದ ಸಚಿವರು ಈ ರೀತಿ ವರ್ತಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ. ಹಾಗಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಶಾಸಕರು ಸಮಸ್ಯೆಗಳನ್ನು ರ‍್ಕಾರದ ಗಮನಕ್ಕೆ ತಂದು ಬಗೆಹರಿಸಬೇಕು ಎಂದು ಮನವಿ ಮಾಡಿದರು.

Related