ಕಾಫಿನಾಡಿಗೂ ವಕ್ಕರಿಸಿದ ಕೊರೋನ

ಕಾಫಿನಾಡಿಗೂ ವಕ್ಕರಿಸಿದ ಕೊರೋನ

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದ  ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ಹೋಗಿರುವುದು ವ್ಯಾಪಾರಿಗಳಿಗೆ ಖುಷಿ ತಂದಿದ್ದರೂ ಮಹಾಮಾರಿ ವಕ್ಕರಿಸುವುದೇ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಮಧ್ಯೆ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ ಮತ್ತಿತರ ಇತಿಹಾಸ ಪ್ರಸಿದ್ಧ ದೇವಾಲಯಗಳಿಗೂ ಪ್ರವೇಶದ ಅನುಮತಿ ನೀಡಿರುವುದರಿಂದ ಸಾವಿರಾರು ಮಂದಿ ಜಿಲ್ಲೆಯ ಮೂಲಕವೇ ಹಾದು ಹೋಗಬೇಕಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಮಲೆನಾಡಿನ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಬರುತ್ತಿರುವ ಪ್ರವಾಸಿಗರು ಜಿಲ್ಲಾಡಳಿತ ಮತ್ತು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಪಾಡದೆ ಚಾರ್ಮಾಡಿ ಘಾಟ್, ರಾಣಿ ಜರಿ, ಹಿರೇಕೊಳಲೆ, ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿ ಮುಂತಾದ ತಾಣಗಳಿಗೆ ಭೇಟಿ ನೀಡುತ್ತಿರುವುದು ಕಂಡುಬರುತ್ತಿದೆ.

ಚಾರ್ಮಾಡಿ ಘಾಟ್ನ ಅಪಾಯದ ತಡೆಗೋಡೆಗಳ ಮೇಲೆ ನಿಂತು ಫೋಟೋ ಸೆರೆಹಿಡಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಜಿಲ್ಲಾಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಜನ ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲೇ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲಾಗಳಿಂದ ಪ್ರವಾಸಿಗರು ಬರುತ್ತಿರುವುದರಿಂದ ಇಲ್ಲಿಗೂ ಕೊರೊನಾ ಮಹಾಮಾರಿ ವಕ್ಕರಿಸುವುದೇ ಎಂಬ ಆತಂಕ ಹೆಚ್ಚಾಗಿದೆ.

ನಿಸರ್ಗ ಸೌಂದರ್ಯ ಹೊಂದಿರುವ ಜಿಲ್ಲಾಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಬೇಕಾಬಿಟ್ಟಿ ಮಾಸ್ಕ್ ಧರಿಸದೆ ಓಡಾಡುವುದು ಮಾತ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Related