ಪೊಲೀಸರ ಮೇಲೆ ಪುಂಡರು ಹಲ್ಲೆ

ಪೊಲೀಸರ ಮೇಲೆ ಪುಂಡರು ಹಲ್ಲೆ

ಕೊಡಗು, ಏ. 21 : ಬೆಂಗಳೂರಿನ ಬಳಿಕ ಇದೀಗ ಕೊಡಗಿನಲ್ಲಿ ಪುಂಡರ ಗುಂಪೊಂದು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ವಾಲಿಬಾಲ್ ಆಡುವುದರ ಮೂಲಕ ಪುಂಡರು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ. ನಾಸಿರ್, ಸಿರಾಜ್, ಸುನೈನ್, ಯಜಾಸ್ ಈ ಕೃತ್ಯ ಎಸಗಿದರು ಎಂಬುದಾಗಿ ತಿಳಿದುಬಂದಿದೆ. ಹಲ್ಲೆಗೆ ಯತ್ನಸಿದ ನಾಲ್ವರ ವಿರುದ್ಧ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related