ಎಲ್ಲ ಜಾತಿ ಧರ್ಮದ ಹಿತವನ್ನು ಕಾಪಾಡುವ ಪಕ್ಷ ಕಾಂಗ್ರೆಸ್ : ಸುನಿಲ್ ಬೊಸ್

ಎಲ್ಲ ಜಾತಿ ಧರ್ಮದ ಹಿತವನ್ನು ಕಾಪಾಡುವ ಪಕ್ಷ ಕಾಂಗ್ರೆಸ್ : ಸುನಿಲ್ ಬೊಸ್

ಚಾಮರಾಜನಗರ: ಎಲ್ಲ ಜಾತಿ ಧರ್ಮದ ಹಿತವನ್ನು ಕಾಪಾಡುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನಿಲ್ ಬೊಸ್ ಅವರು ಹೇಳಿದ್ದಾರೆ.

ಇಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತಿ ಹರವೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದು ಹತ್ತು ವರ್ಷದಿಂದ ದೇಶವನ್ನು ಆಳುತ್ತಿರುವ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ರೀತಿಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ.

ಬಡವರನ್ನು ಕಷ್ಟಕ್ಕೆ ತಳ್ಳಿ ಶ್ರೀಮಂತರ ಪರವಾಗಿ ಕಾಯ್ದೆಗಳನ್ನು ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಕೆಳಗಿಳಿಸುವ ಸಂದರ್ಭ ಈಗ ಬಂದಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಹಾಗೆ ನೀವು ಮತದಾರರು ಮಾಡಬೇಕೆಂದು ಹೇಳಿದರು.

ಇಡೀ ನಮ್ಮ ದೇಶದ ಆಡಳಿತವನ್ನು ನಿರ್ಧಾರ ಮಾಡುವ ಚುನಾವಣೆ ಇದಾಗಿದೆ. ಯಾವ ಪಕ್ಷವೂ ಬಡವರ ಪರವಾಗಿ ನೋಂದವರ ಪರವಾಗಿ ಶೋಷಿತರ ಪರವಾಗಿ ಯೋಜನೆಗಳನ್ನು ಮಾಡುತ್ತೋ ಅವರ ಪರವಾಗಿ ಮತ ನೀಡಿ ಬೆಂಬಲಿಸಬೇಕು. ಇಂತಹ ಪಕ್ಷ ಇದೆ ಅಂದರೆ ಅದು ಕೇವಲ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ನೀಡಿತ್ತು ಗ್ಯಾರೆಂಟಿಗಳನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯುವಕರು ಕೂಡ ಈ ಸದುಪಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭಿವೃದ್ಧಿಯನ್ನು ನೋಡಿ ಅವರಿಗೆ ಕೂಲಿ ಕೊಡುವ ಸಂದರ್ಭ ನಿಮ್ಮದಾಗಿದೆ ಹಾಗಾಗಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕೆಂದರೆ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

Related