ರಣಘಟ್ಟ ಯೋಜನೆ ಅನುಷ್ಠಾನಕ್ಕೆ ಬದ್ಧ

ರಣಘಟ್ಟ ಯೋಜನೆ ಅನುಷ್ಠಾನಕ್ಕೆ ಬದ್ಧ

ಬೇಲೂರು: ರಣಘಟ್ಟ ಯೋಜನೆ ಅನುಷ್ಠಾನ, ಎತ್ತಿನಹೊಳೆ ಯೋಜನೆಯಲ್ಲಿ ರೈತರಿಗೆ ಪರಿಹಾರ ಈ ಎರಡೂ ಅನುಷ್ಠಾನಗೊಳಿಸಲು ಯಾವುದೆ ರೀತಿಯ ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಸಂಸದ ಪ್ರಜ್ವಲ್‌ರೇವಣ್ಣ ಹೇಳಿದರು.
ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕುಡಿಯುವ ನೀರು ಹರಿಸುವ ನಿಟ್ಟಿನಲ್ಲಿ ಯಾವುದೆ ರೀತಿಯ ಹೋರಾಟ ಮಾಡಿಯಾದರೂ ರಣಘಟ್ಟ ಒಡ್ಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದರ ಜೊತೆಗೆ ಎತ್ತಿನಹೊಳೆ ಯೋಜನೆಗೆ ಭೂಮಿಕಳೆದುಕೊಂಡು ಪರಿಹಾರವೂ ಸಿಗದ ರೈತರಪರವಾಗಿ ಧ್ವನಿಎತ್ತಲಾಗುವುದು ಇದರಲ್ಲಿ ಅನುಮಾನಬೇಡ ಎಂದರು.
ಬಿಜೆಪಿ ಸರ್ಕಾರ ತನ್ನದೆ ಆದ ಯೋಚನೆಯಿಂದ ಕೊರೋನಾ ನೆಪದಲ್ಲಿ ಆರ್ಥಿಕ ಮುಗ್ಗಟ್ಟು ಎಂದು ಹೇಳುತ್ತ ಅನುದಾನವನ್ನು ವಾಪಸ್ ಪಡೆದು ಅಭಿವೃದ್ಧಿ ಕೆಲಸಗಳ ಆಗದಂತೆ ಮಾಡಿದೆ. ಇದೀಗ ವಾಪಸ್ ಪಡೆದ, ತಡೆಹಿಡಿದ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭವಾಗಲಿದೆ.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕುಡಿಯುವ ನೀರು ತರಲು ಯಗಚಿ ಏತನೀರಾವರಿ ಯೋಜನೆ, ರಣಘಟ್ಟ ಯೋಜನೆ ಅನುಷ್ಠಾನಕ್ಕೆ ಹಳೇಬೀಡು ಪುಷ್ಪಗಿರಿಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ರೈತಸಂಘ, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಕ್ಷಬೇದಮರೆತು ಹೋರಾಟ ನಡೆಸಿ ಕೇಸುಸಹ ಹಾಕಿಸಿಕೊಂಡಿದ್ದೆವು. ಆದರೂ ಇನ್ನೂ ಯೋಜನೆ ಕಾರ್ಯಗತಗೊಂಡಿಲ್ಲ. ಯೋಜನೆ ಅನುಷ್ಠಾನಕ್ಕೆ ಮತ್ತೊಮ್ಮೆ ಹೋರಾಟ ನಡೆಸುವ ಅಗತ್ಯ ಕಂಡುಬರುತ್ತಿದೆ ಎಂದರು.

Related