ನೇಹಾ ತಂದೆಗೆ ದೂರವಾಣಿ ಮೂಲಕ ಸಿಎಂ ಸಾಂತ್ವನ

ನೇಹಾ ತಂದೆಗೆ ದೂರವಾಣಿ ಮೂಲಕ ಸಿಎಂ ಸಾಂತ್ವನ

ಹುಬ್ಬಳ್ಳಿ: ಏಪ್ರಿಲ್ 18ರಂದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಘಟನೆ ಹುಬ್ಬಳ್ಳಿ ನಗರದ ವಿಬಿವಿ ಕಾಲೇಜಿನಲ್ಲಿ ನಡೆದಿದ್ದು ಈ ಘಟನೆಯಲ್ಲಿ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿ ಕೊಲೆಗಿಡಾಗಿದ್ದಾಳೆ.

ಇನ್ನು ಕೊಳಗಿದ ನೆಹ ವರ ಕುಟುಂಬಕ್ಕೆ ರಾಜ ಮಾತ್ರವಲ್ಲದೆ ಕೇಂದ್ರ ನಾಯಕರುಗಳು ಭೇಟಿ ನೀಡಿ ಸ್ನೇಹ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅದರಂತೆ ಇಂದು ಕಾನೂನು ಸಚಿವರಾಗಿರುವಂತಹ ಎಚ್ ಕೆ ಪಾಟೀಲ್ ರವರು ನಿರಂಜನ್ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ತಂದೆ ನಿರಂಜನ್​ ಹಿರೇಮಠ ಅವರೊಂದಿಗೆ ಇಂದು ದೂರವಾಣಿ ಮೂಲಕ ಮಾತನಾಡಿ, ವೆರಿ ಸಾರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಹತ್ಯೆ ಪ್ರಕರಣವನ್ನು ತಮ್ಮದೇ ಪಕ್ಷದ ಸರ್ಕಾರವಿದ್ದರೂ ಸರಿಯಾಗಿ ಮುಂದುವರಿಸಿಕೊಂಡು ಹೋಗುತ್ತಿಲ್ಲ ಎಂದು ನಿರಂಜನ್ ಹಿರೇಮಠ್ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರೇಮಠ ಮನೆಗೆ ಸಿಎಂ ಮತ್ತು ಡಿಸಿಎಂ ಭೇಟಿ ನೀಡದೆ ಇದ್ದದ್ದು ಕೂಡ ಹಲವರ ಟೀಕೆಗೆ ಗುರಿಯಾಗಿತ್ತು.

ನಿರಂಜನ ಹಿರೇಮಠ ಅವರ ನಿವಾಸಕ್ಕೆ ಇಂದು ಸಚಿವ ಹೆಚ್​.ಕೆ ಪಾಟೀಲ್ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಹೆಚ್​​.ಕೆ.ಪಾಟೀಲ್​ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ ಹಿರೇಮಠ ಜೊತೆ ಮಾತನಾಡಿ, ನಾವು ನಿಮ್ಮ ಜೊತೆ ಇರುತ್ತೇವೆ, ವೆರಿ ಸಾರಿ ಎಂದರು. ಪ್ರಕರಣವನ್ನು ಸಿಐಡಿಗೆ ನೀಡಿದ್ದಕ್ಕೆ ನಿಮಗೆ ಧನ್ಯವಾದ ಎಂದು ನಿರಂಜನ ಹಿರೇಮಠ ಸಿಎಂಗೆ ಹೇಳಿದರು.

https://twitter.com/explore?ref_src=twsrc%5Etfw%7Ctwcamp%5Etweetembed%7Ctwterm%5E1782667174857044453%7Ctwgr%5Ee612dc23cc498d1140a7329c21f38e9cc1baaba7%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2024%2FApr%2F23%2Fcm-siddaramaiah-consoles-niranjan-hiremath-father-of-neha-hiremath-over-phone

Related