ಹಿರಿಯ ನಾಗರೀಕರಿಂದ ಸ್ವಚ್ಛತಾ ಅಭಿಯಾನ

ಹಿರಿಯ ನಾಗರೀಕರಿಂದ ಸ್ವಚ್ಛತಾ ಅಭಿಯಾನ

ಶಹಾಪುರ : ಸ್ವಚ್ಛತೆ ಎಂಬುದು ಜೀವನದ ಭಾಗವಾಗಿರಬೇಕು. ಮನೆ ಸುತ್ತ-ಮುತ್ತಲಿನ ಪರಿಸರ, ಬೀದಿ ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಂಡರೆ ಇಡೀ ಸಮಾಜ ಸ್ವಚ್ಛ, ಶುಭ್ರವಾಗಿರುತ್ತದೆ ಎಂದು ಹಿರಿಯ ಮುಖಂಡರಾದ ರ‍್ವತರೆಡ್ಡಿ ಬೆಂಡೆಬೆಂಬಳಿ ಹೇಳಿದರು.
ನಗರದ ಪೊಲೀಸ್ ಆಟದ ಮೈದಾನದಲ್ಲಿ ಭಾನುವಾರ ಬಸವೇಶ್ವರ ಬಡಾವಣೆಯ ಹಿರಿಯ ನಾಗರೀಕರ ವತಿಯಿಂದ ಸಾಮಾಜಿಕ ಕರ‍್ಯರ‍್ತ ಗುರುಲಿಂಗಪ್ಪ ಸರಶೇಟ್ಟಿ ನೇತೃತ್ವದಲ್ಲಿ ಆಯೋಜಿಸಲಾದ ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕರ‍್ಯಕ್ರಮದಲಿ ಮಾತನಾಡಿ, ನಗರಗಳ ಸ್ವಚ್ಛತೆ ರ‍್ಕಾರದ ಕೆಲಸವಲ್ಲ, ಅದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸ್ವಚ್ಛತೆ ಇರುವ ಕಡೆ ಸಮೃದ್ಧಿ ಆರೋಗ್ಯ ಸಾಧ್ಯ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಹಾತ್ಮಾ ಗಾಂಧೀಜಿ ಯವರ ಸ್ವಚ್ಛ, ಆರೋಗ್ಯಕರ ಭಾರತದ ಕನಸನ್ನು ನನಸಾಗಿಸಬೇಕು. ಸರ‍್ಕಾರ ಅನೇಕ ಕರ‍್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ರ‍್ಕಾರದ ಜೊತೆಗೆ ನಾವೆಲ್ಲರೂ ಸಹಕರಿಸಬೇಕು ಎಲ್ಲೆಂದರಲ್ಲಿ ಕಸವನ್ನು ಹಾಕದೆ ಕಸ ಮುಕ್ತ ಭಾರತವನ್ನಾಗಿ ಮಾಡಲು ಪಣ ತೊಡಬೇಕು ಎಂದರು.
ಈ ಸಂರ‍್ಭದಲ್ಲಿ ಆರ್.ಎಸ್ ಹಳಗೊಂಡ, ಪಿಡ್ಡಪ್ಪ ನಂದಿಕೋಲ, ಶರಣಪ್ಪ ಮುಂಡಾಸ್, ಶಿವರಾಜ ಇಜೇರಿ, ಗುರುಲಿಂಗಯ್ಯ ಸ್ವಾಮಿ, ಅಮರಪ್ಪ ಮೇಟಿ, ಎಮ್.ಪಿ ಶರ‍್ಣಿ, ಚಂದ್ರಕಾಂತ ಕುಂಬಾರ, ಶಿವಶರಣಪ್ಪ ಕನ್ನೊಳ್ಳಿ, ಅಣ್ಣರಾವ್ ಹಿರೇಗೌಡರು, ಮಲ್ಲಿಕರ‍್ಜುನ, ಶೇಖರ, ವಿಶ್ವನಾಥರೆಡ್ಡಿ , ಅಶೋಕ ದಿನ್ನಿ, ಇದ್ದರು.

Related