ಚೀನಾ ಕ್ಯಾತೆ, ಆಮದು ನಿಷೇಧಕ್ಕೆ ಒತ್ತಾಯ

ಚೀನಾ ಕ್ಯಾತೆ, ಆಮದು ನಿಷೇಧಕ್ಕೆ ಒತ್ತಾಯ

ನವದೆಹಲಿ : ಕೊರೋನಾ ವೈರಸ್‌ನಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಚೀನಾ ಇದೀಗ ತನ್ನ ಕುತಂತ್ರ ಬುದ್ಧಿಯಿಂದ ಭಾರತದ ಮೇಲೆ ಆಕ್ರಮಣ ಮಾಡಿದೆ.
ಈ ಆಕ್ರಮಣವನ್ನು ಖಂಡಿಸಿ ಇದೀಗ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸಲು ಸಿದ್ಧತೆ ನಡೆಸಿದ್ದು, ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಪಟ್ಟಿ ಮಾಡಿದೆ.

ಮೊದಲ ಹಂತವಾಗಿ 2021ರ ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಸಿಎಐಟಿ ಕರೆಕೊಟ್ಟಿದೆ.

ಪ್ರಸ್ತುತ, ಭಾರತವು ಚೀನಾದಿಂದ ವಾರ್ಷಿಕವಾಗಿ ಸುಮಾರು 5.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮೌಲ್ಯವನ್ನು ಕ್ರಮಕ್ರಮವಾಗಿ ಕಡಿಮೆ ಮಾಡುತ್ತಾ ಬರಬೇಕಿದೆ ಎಂದು ಹೇಳಿದೆ.
ಮೊದಲ ಹಂತದಲ್ಲಿ, ಸಿಎಐಟಿ 500ಕ್ಕೂ ಹೆಚ್ಚು ವಸ್ತುಗಳ ಪಟ್ಟಿ ಮಾಡಿದೆ. ಇದರಲ್ಲಿ ಅನೇಕ ವಸ್ತುಗಳು ಭಾರತದಲ್ಲಿಯೂ ತಯಾರು ಆಗುತ್ತಿದ್ದರೂ ವಿದೇಶದ ಪ್ರ

ಲೋಭನೆಗೆ ಬಿದ್ದು ಚೀನಾದಿಂದ ನಾವು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಭಾರತಕ್ಕಿಂತ ಅಗ್ಗದ ವಸ್ತು ಅದಾಗಿದ್ದರೂ, ಅಷ್ಟೇ ಕಳಪೆ ಗುಣಮಟ್ಟವನ್ನೂ ಹೊಂದಿರುತ್ತದೆ. ಆದರೆ ಅಗ್ಗದ ಆಸೆಗೆ ನಾವು ಬೀಳುತ್ತಿದ್ದೇವೆ. ಇದನ್ನು ನಾವು ನಿಧಾನವಾಗಿ ಕಡಿಮೆ ಮಾಡಿದರೆ, ಭಾರತದಲ್ಲಿಯೇ ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡುವ ಅಗತ್ಯವಿದೆ ಎಂದು ಒಕ್ಕೂಟ ಹೇಳಿದೆ.

Related