ಮಗುವಿಗೆ ಸ್ಯಾನಿಟೈಸರ್ ಹೆಸರಿಟ್ಟ ಅಪ್ಪ!

ಮಗುವಿಗೆ ಸ್ಯಾನಿಟೈಸರ್ ಹೆಸರಿಟ್ಟ ಅಪ್ಪ!

ಏ. 14 : ‘ಅಯ್ಯೋ ಹೆಸರಲ್ಲೇನಿದೆ ಬಿಡಿ, ಯಾವ್ದೋ ಒಂದು ಹೆಸರನ್ನು ಇಟ್ಟರಾಯ್ತು!’ ಎಂದು ಹಲವು ಜನ ಹಗುರವಾಗಿ ಪರಿಗಣಿಸಬಹುದು. ಆದರೆ, ಜೀವನಪೂರ್ತಿ ನಮಗೊಂದು ಐಡೆಂಟಿಟಿ ನೀಡುವ ಹೆಸರು ಮತ್ತು ಅದರ ಅರ್ಥಗಳೆರಡೂ ಬಹಳ ಮುಖ್ಯ. ನಮ್ಮ ಹೆಸರೇ ನಮ್ಮ ಐಡೆಂಟಿಟಿಯಾಗಿರುವಾಗ ಅದನ್ನು ಲಘುವಾಗಿ ಪರಿಗಣಿಸುವುದಾದರೂ ಹೇಗೆ? ಹೆಸರಿನ ಬಗ್ಗೆ ಇಷ್ಟೆಲ್ಲ ಪೀಠಿಕೆ ಯಾಕೆ ಅಂತೀರಾ?

ನಮ್ಮ ಹೆಸರನ್ನು ನಾವೇ ಇಟ್ಟುಕೊಳ್ಳಬಹುದಾದ ಆಯ್ಕೆ ಇರುವುದಿಲ್ಲ. ಕೆಲವರು ಕೊನೆಗೆ ತಮ್ಮ ಹೆಸರನ್ನು ಕಡತಗಳಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಆದರೆ, ಅಷ್ಟರಲ್ಲಾಗಲೇ ಬಾಲ್ಯದ ನಮ್ಮ ಮೂಲ ಹೆಸರು ಎಲ್ಲರ ಮನಸಿನಲ್ಲಿ ದಾಖಲಾಗಿರುತ್ತದೆ. ಅಪ್ಪ-ಅಮ್ಮನಿಗೆ ಯಾವ ಹೆಸರು ಇಷ್ಟವಾಗುತ್ತದೋ ಅದನ್ನು ಮಕ್ಕಳಿಗೆ ಇಡುತ್ತಾರೆ. ಆದರೆ, ದೊಡ್ಡವರಾದ ಮೇಲೆ ಆ ಮಕ್ಕಳಿಗೆ ತಮ್ಮ ಹೆಸರೇ ದೊಡ್ಡ ಸಮಸ್ಯೆಯಾಗಬಾರದಲ್ಲ… ಈ ಹಿಂದೆ ಸುನಾಮಿ ಅಬ್ಬರ ಹೆಚ್ಚಾದಾಗ ಹುಟ್ಟಿದ ಮಗುವಿಗೆ ಅದರ ಅಪ್ಪ-ಅಮ್ಮ ಸುನಾಮಿ ಎಂದೇ ಹೆಸರಿಟ್ಟಿದ್ದರು. ಇದೀಗ ಕೊರೋನಾ ಸರದಿ!

ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದಾರೆ. ಈ ವೇಳೆ ತೀವ್ರ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹೊರಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಹುಟ್ಟಿರುವ ಮಗುವಿಗೆ ಆ ಮಗುವಿನ ಅಪ್ಪ-ಅಮ್ಮ ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.

Related