ಕನಕಪುರ ಬಂಡೆಗೆ ಮತ್ತೆ ಸಿಬಿಐ ನೋಟಿಸ್

ಕನಕಪುರ ಬಂಡೆಗೆ ಮತ್ತೆ ಸಿಬಿಐ ನೋಟಿಸ್

ಬೆಂಗಳೂರು: ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಈಗಾಗಲೇ ಹಲವು ಬಾರಿ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಿತ್ತು.

ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆಯಲ್ಲ ಹಾಗಾಗಿ ನನ್ನ ರಾಜಕೀಯ ವ್ಯಕ್ತಿತ್ವದ ಮೇಲೆ ಬರೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೊಡುತ್ತಿದ್ದಾರೆ.

ಹೌದು, ಡಿಸಿಎಂ ಡಿಕೆ ಶಿವಕುಮಾರ್‌ ಕೇರಳ ಮೂಲದ ಖಾಸಗಿ ವಾಹಿನಿಯಲ್ಲಿ ಹೂಡಿಕೆ ಮಾಡಿರುವ ವಿವರಗಳನ್ನು ನೀಡುವಂತೆ ಡಿಸಿಎಂ ಡಿಕೆಶಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಖಾಸಗಿ ಚಾನೆಲ್ ಎಂಡಿ ಬಿ.ಎಸ್. ಶಿಜು ಅವರಿಗೆ ಸಿಬಿಐ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಅವರ ಜೊತೆ ವ್ಯವಹಾರಿಕ ಪಾಲು ಹೊಂದಿರುವ 32ಕ್ಕೂ ಹೆಚ್ಚು ಮಂದಿಗೆ ಜನವರಿ 11ರಂದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ. ಸಿಬಿಐ ಮತ್ತೆ ನೋಟಿಸ್ ನೀಡಿರೋದ್ರಿಂದ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗುತ್ತೆ ಎನ್ನಲಾಗಿದೆ.

 

Related