ಬುಮ್ರಾಗೆ ಶಾಕ್

ಬುಮ್ರಾಗೆ ಶಾಕ್

ದುಬೈ, ಫೆ. 13 : ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೀಗ ಶಾಕ್. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್ ಶೋ ಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೀಗ ಶಾಕ್ ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬುಮ್ರಾಗೆ ಹಿನ್ನಡೆಯಾಗಿದ್ದು, ನಂ.1 ಸ್ಥಾನದಲ್ಲಿದ್ದ ಬುಮ್ರಾ ಪಟ್ಟ ಕಳೆದುಕೊಂಡಿದ್ದು, 45 ಅಂಕ ಕಳೆದುಕೊಂಡು 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ವಿಕೆಟ್ ಕೀಳಲು ವಿಫಲರಾಗಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲರಾದ ಹೊರತಾಗಿಯೂ 869 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

Related