ನಡು ರಸ್ತೆಯಲ್ಲೇ ಗೂಳಿ ಕಾಳಗ; ಟ್ರಾಫಿಕ್ ಜಾಮ್..

ನಡು ರಸ್ತೆಯಲ್ಲೇ ಗೂಳಿ ಕಾಳಗ; ಟ್ರಾಫಿಕ್ ಜಾಮ್..

ಶಹಾಪುರ :ನಗರದ ರಾಷ್ಟ್ರೀಯ ಹೆದ್ದಾರಿ ಹಳೆ ಬಸ್ ನಿಲ್ದಾಣದ ಹತ್ತಿರ ಎರಡು ಗೂಳಿಗಳ ನಡುವೆ ಕಾಳಗ ಉಂಟಾಗಿ ಒಂದು ಗಂಟೆಗಳ ವರೆಗೂ ರಸ್ತೆಯಲ್ಲಿ ಟ್ರಾಫೀಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.
ಇದನ್ನು ಕಂಡ ಕೆಲವರು ಹೆದರಿ ಅಲ್ಲಿಂದ ಓಡಿ ಹೋದ ದೃಶ್ಯ ಸಹ ಕಂಡು ಬಂತು. ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗಳ ಪಕ್ಕದಲ್ಲಿ ಆಟೋ, ಟಂಟಂ ಮತ್ತು ಬಿಡಾಡಿ ಜಾನುವಾರುಗಳು ಎಲ್ಲೆಂದರಲ್ಲಿ ನಿಲ್ಲುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳಲ್ಲೇ ನಿಲ್ಲುವ ಜಾನುವಾರುಗಳು, ಗೂಳಿಗಳು ನಡು ರಸ್ತೆಯಲ್ಲೆ ನಿಂತು ಸಂಚಾರಕ್ಕೆ ತಡೆಯುತ್ತಿದ್ದು ಸವಾರರು ಪರದಾಡುವಂತಾಗಿದೆ.
ದಿನಕ್ಕೊಂದಾದರೂ ಹೆದ್ದಾರಿಯಲ್ಲಿಯೇ ಜಾನುವಾರುಗಳಿಗೆ ವಾಹನಗಳು ಡಿಕ್ಕಿಯಿಂದ ಮೃತಪಟ್ಟ ಉದಾಹರಣೆಗಳಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ವಾಹನಗಳ ದಟ್ಟನೆ ದಿನೇ ದಿನೇ ಹೆಚ್ಚಾಗುತ್ತಿದ್ದು ಜಾನುವಾರುಗಳು ಎಲ್ಲೇಂದರಲ್ಲಿ ಮಲಗುತ್ತಿದ್ದು ತೊಂದರೆ ಉಂಟಾಗುತ್ತಿದೆ.
ಜಾನುವಾರುಗಳಿಗೆ ರಸ್ತೆಗಿಳಿಸದಂತೆ ಜಾನುವಾರುಗಳ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡುವಲ್ಲಿ ನಗರಸಭೆ ನಿರ್ಲಕ್ಷ್ಯ ತೋರಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಬಿಡಾಡಿ ಜಾನುವಾರುಗಳು ನಿತ್ಯ ರಾಷ್ಟ್ರೀಯ ಹೆದ್ದಾರಿಯನ್ನೆ ಆವಾಸ ಸ್ಥಾನ ಮಾಡಿಕೊಂಡಿದ್ದು ಇವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳೂ ಎಚ್ಚೆತ್ತುಕೊಂಡು ಅನಾಹುತಗಳನ್ನು ತಪ್ಪಿಸಲು ಮುಂದಾಗಬೇಕಿದೆ ಎಂದು ಜನತೆ ಆಗ್ರಹಿಸಿದ್ದಾರೆ.

Related