26 ನೇಯ ವೀರಶೈವ ಸಮಾಜದ ವಧು-ವರ,ಪಾಲಕರ ಸಮ್ಮೇಳನ

  • In State
  • February 7, 2020
  • 447 Views
26 ನೇಯ ವೀರಶೈವ ಸಮಾಜದ ವಧು-ವರ,ಪಾಲಕರ ಸಮ್ಮೇಳನ

ಚಿಕ್ಕೋಡಿ, ಫೆ. 07:  ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭವ್ಯ ವಧು-ವರ, ಪಾಲಕರ ಸಮ್ಮೇಳನವನ್ನು ಆಯೋಜಿಸಿ ಸುದ್ದಿಗೋಷ್ಟೀಯಲ್ಲಿ ನೋಡಿ ಸಂಪೂರ್ಣಮಾಹಿತಿಯನ್ನು ವಜ್ರಕಾಂತ ಸದಲಗೆ ಅಧ್ಯಕರು ವೀರಶೈವ ಲಿಂಗಾಯತ ಸಮಾಜ ಮಾತನಾಡಿ ಈ ವರ್ಷ ನಾವೂ 5 ವಧು ವರರ ಮದುವೆಯನ್ನು ನಮ್ಮ ಸಮಿತಿಯಿಂದ ಉಚಿತವಾಗಿ ಮಾಡಲಿದ್ದೇವೆ ಹಾಗೂ ಮಧುವೆಗೆ ಬೇಕಾದ ಸಾಮಗ್ರಿಗಳನ್ನು ನೀ‌ಡಿ ವಧು ವರರಿಗೆ ಬಂಗಾರ, ಕಾಲುಂಗರ, ತಾಳಿ, ಬಟ್ಟೆ, ಉಡುಪು ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕ್ರಪಾಶೀರ್ವಾದ ಮೂಲಕ ಸಮ್ಮೇಳನ ವನ್ನು ನಡೆಸಲಾಗುವುದು. ಅತಿಥಿಯಾಗಿ ಇಲ್ಲಿ ಪ್ರಾಣಲಿಂಗ ಸ್ವಾಮಿ ಸಮಾಧಿ ಮಠ ನಿಪ್ಪಾಣಿ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ್ ಕೋಠಿವಾಲೆ ಪಾಲ್ಗೊಳ್ಳುತ್ತಾರೆ ಹಾಗೂ ಉದ್ಘಾಟನೆಯನ್ನು ವಿದ್ಯಾ ಸಂವರ್ದಕ ಮಂಡಳಿಯ ಅಧ್ಯಕ್ಷ ಬಿ.ಆರ್.ಪಾಟೀಲ್ , ಡಾ.ಬಸವರಾಜ್ ಕೋಠಿವಾಲೆ,  ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಿದ್ದಾರೆ

ಶ್ರೀ ವೀರಶೈವ ಸಮುದಾಯದ ವಜ್ರಕಾಂತ್ ಸದಲಗೆ ಅಧ್ಯಕ್ಷ, ಭರ್ಮು ಸಾತಾವಾರ ವೀರಶೈವ ಸಮಾಜದ ಚೇರಮನ್, ಕಾರ್ಯದರ್ಶಿ ದೀಪಕ್ ಪಾಟೀಲ್, ವಧು-ವರ ಸಮಿತಿಯ ಅಧ್ಯಕ್ಷ ದಯಾನಂದ್ ಶಿಪ್ಪುರೆ, ಕಾರ್ಯದರ್ಶಿ ಪ್ರಕಾಶ್ ವಧಡಿ, ಡಾ.ಸಿ.ಬಿ.ಕುರ್ಬೆಟ್ಟಿ, ಸುನಿಲ್ ನೇಜೆ, ದತ್ತಾತ್ರೇ ಖೋತ ಭಾಗ ವಹಿಸಿದರು.

Related