ಬ್ಲ್ಯಾಕ್ ಫಂಗಸ್ ಎಫೆಕ್ಟ್: ಅಲರ್ಟ್ ಆದ ಜಿಲ್ಲಾಡಳಿತ

ಬ್ಲ್ಯಾಕ್ ಫಂಗಸ್ ಎಫೆಕ್ಟ್: ಅಲರ್ಟ್ ಆದ ಜಿಲ್ಲಾಡಳಿತ

ಬಾಗಲಕೋಟೆ : ರಾಜ್ಯದಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವುದರ ಮಧ್ಯೆಯೇ ಬ್ಲ್ಯಾಕ್ ಫಂಗಸ್ ಭೀತಿ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಬ್ಲ್ಯಾಕ್ ಫಂಗಸ್ ಹಾವಳಿ ಶುರುವಾಗಿದೆ.

ಜಿಲ್ಲೆಗೂ ಬ್ಲ್ಯಾಕ್ ಫಂಗಸ್ ವಕ್ಕರಿಸಿದ್ದು, ಜಿಲ್ಲೆಯ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಎಚ್ಚೆತ್ತ ಜಿಲ್ಲಾಡಳಿತ ಕೋವಿಡ್ ನಿರ್ವಹಣೆಯ ವೈದ್ಯರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದರು.

ಭಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ 39 ಜನ ವೈದ್ಯರಿಗೆ ವಿಡಿಯೋ ಕಾನ್ಪರೆನ್ಸ್ ನಡೆದಿದೆ. ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ ಮತ್ತು ಡಿಎಚ್‌ಓ ಡಾ.ಅನಂತ ದೇಸಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀವ್ರ ಚರ್ಚೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ನಿರ್ವಹಣೆ ಮಾಡುವುದು ಅದರೊಟ್ಟಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್ ಬಗ್ಗೆ ಕೈಗೊಳ್ಳಬೇಕಾದ ಸರ್ಕಾರದಿಂದ ಬಂದಿರುವ ಗೈಡ್‌ಲೈನ್ಸ್ಗಳನ್ವಯ ಮುಂಜಾಗೃತ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಇದೇ ವೇಳೆ ಕೋವಿಡ್ ಆಸ್ಪತ್ರೆ ನಿರ್ವಹಣೆ ಮಾಡುತ್ತಿರುವ ವೈದ್ಯರು ಸಹ ತಮ್ಮ ಅಹವಾಲುಗಳನ್ನ ಜಿಲ್ಲಾಡಳಿತಕ್ಕೆ ಹೇಳಿಕೊಂಡರು ಇದಕ್ಕೆ ಸಂಭಂದಪಟ್ಟಂತೆ ಸೂಕ್ತ ಕ್ರಮಗಳ ಭರವಸೆ ಜಿಲ್ಲಾಡಳಿತದಿಂದ ನೀಡಲಾಯಿತು.

Related