ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಶಬ್ದ ಮಿತಿ ಮಾರ್ಗಸೂಚಿ : ಆರಗ ಜ್ಞಾನೇಂದ್ರ

ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಶಬ್ದ ಮಿತಿ ಮಾರ್ಗಸೂಚಿ : ಆರಗ ಜ್ಞಾನೇಂದ್ರ

ಬೆಂಗಳೂರು: ನಾನೀಗ ಗೃಹ ಖಾತೆಯಲ್ಲಿ ಎಕ್ಸ್ಪರ್ಟ್ ಆಗಿದ್ದೇನೆ. ನನಗೆ ಈ ಖಾತೆ ಸಾಕು ಅನ್ನಿಸಿಲ್ಲ. ನಿಮಗೆ ಸಾಕು ಅನ್ನಿಸುತ್ತಾ ಹೇಳಿ? ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್​ಐ ನೇಮಕಾತಿ ಅಕ್ರಮ ಹಗರಣ ಸಂಬಂಧ ಎಲ್ಲ ರೀತಿಯ ತನಿಖೆ ನಡೆಯುತ್ತಿದೆ. ವಿತ್ ಎವಿಡೆನ್ಸ್ ಎಲ್ಲರನ್ನೂ ಹಿಡಿಯುತ್ತಿದ್ದಾರೆ. ಪ್ರಕರಣದ ಕಿಂಗ್​ ಪಿನ್ ಅನ್ನು ಈಗಾಗಲೇ ಹಿಡಿದಿದ್ದಾರೆ. ಪಕ್ಷ,ಪಂಗಡಕ್ಕಿಂತ ಯಾರೇ ತಪ್ಪು ಮಾಡಿದ್ರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ತೀವಿ. ಸಮಗ್ರವಾಗಿ ತನಿಖೆ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷ ವಿಚಾರವಾಗಿ ಮಾತನಾಡಿ, ಸರ್ಕಾರ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಶಬ್ದ ಮಿತಿ ಮಾರ್ಗಸೂಚಿ ಹೊರಡಿಸಿದೆ. 15 ದಿನಗಳ ಕಾಲ ಆಕ್ಷೇಪಣೆ ಹಾಕಲು ಅನುಮತಿ ಇದೆ. ಪ್ರಾಧಿಕಾರ ಹೇಳಿರುವ ಪ್ರಕಾರ ಮಾಡಲಾಗ್ತಿದೆ. ಅದನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರ ವರೆಗೂ ಮೈಕ್ ಬಳಸುವಂತಿಲ್ಲ. ಅನುಮತಿಯಿಲ್ಲದೇ ಮೈಕ್ ಉಪಯೋಗಿಸುವಂತಿಲ್ಲ. ಹಾಗೇನಾದ್ರೂ ಆದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರ ಪ್ರಕಾರವೇ ನಡೆಯಬೇಕು ಎಂದು ಹೇಳಿದರು.

Related