ದಲಿತರ ಹೆಸ್ರಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ: ಕಾಂಗ್ರೆಸ್ ವಿರುದ್ಧ ಕಾರಜೋಳ ವಾಗ್ದಾಳಿ

ದಲಿತರ ಹೆಸ್ರಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ: ಕಾಂಗ್ರೆಸ್ ವಿರುದ್ಧ ಕಾರಜೋಳ ವಾಗ್ದಾಳಿ

ಬೆಳಗಾವಿ : ಕಾಂಗ್ರೆಸ್ ದೀನ-ದಲಿತರರು, ಅಲ್ಪಸಂಖ್ಯಾತರ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಆದರೆ, ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಕಟ್ಟಿಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ಅವರು ನೂರಕ್ಕೆ ನೂರರಷ್ಟು ಭಾರತದ ರಾಷ್ಟ್ರಪತಿ ಆಗುತ್ತಾರೆ. ಕಾಂಗ್ರೆಸ್​ನವರು ಯಾವತ್ತೂ ದಲಿತರು, ಆದಿವಾಸಿಗಳಿಗೆ ಉನ್ನತ ಹುದ್ದೆ ಕೊಟ್ಟಿಲ್ಲ. ಇವತ್ತು ನರೇಂದ್ರ ಮೋದಿ ಸರ್ಕಾರ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿ, ಪ್ರಜಾಪ್ರಭುತ್ವ ಸೌಂದರ್ಯ ತಂದಿದೆ. ನಾನು ಕಾಂಗ್ರೆಸ್ ನಾಯಕರಿಗೆ ಕೇಳಲು ಬಯಸುತ್ತೇನೆ. ಸಿದ್ದರಾಮಯ್ಯನವರು ಅಹಿಂದಾ ಅಹಿಂದಾ ಅಂತ ಹೇಳಿ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿದ್ದಾರೆ.

ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರು 8 ಬಾರಿ ಆಯ್ಕೆ ಆಗಿದ್ದಾರೆ. ಐವತ್ತು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಕೇಂದ್ರ ಮಂತ್ರಿಯಾಗಿ, ರಾಜ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಖರ್ಗೆ ಅವರನ್ನು ಯಾವಾತ್ತಾದರೂ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಅಂದ್ರಾ? ಮಾಡಿಲ್ಲ. ಇತ್ತ ಸಿದ್ದರಾಮಯ್ಯ ಅಹಿಂದಾ, ಅಹಿಂದಾ ಅಂತಾ ಓಡಾಡ್ತಾರೆ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ರಾ? ಇಲ್ಲ. ಅಲ್ಪಸಂಖ್ಯಾತ ನಾಯಕರನ್ನ ಮಾಡಿಲ್ಲ. ಇದು ಕೇವಲ ಕಾಂಗ್ರೆಸ್​ನವರ ಬೂಟಾಟಿಕೆ ರಾಜಕಾರಣ. ಕಾಂಗ್ರೆಸ್​ನವರು ದಲಿತರ, ಅಲ್ಪಸಂಖ್ಯಾತರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಉಮೇಶ್ ಕತ್ತಿಯವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆ ಬಗ್ಗೆ ಪಕ್ಷದಲ್ಲಾಗಲಿ, ಸರ್ಕಾರದಲ್ಲಿ ಆಲೋಚನೆ ಮಾಡಿಲ್ಲ. ಅಂತಹ ವಿಚಾರಗಳು ಚರ್ಚೆಗಳು ಬಂದಿಲ್ಲ ಎಂದರು.

Related