ಗದಗದ ‘ಭಿಕ್ಷಾ ಅಭಿಯಾನ’ ರಾಜ್ಯದಲ್ಲಿಯೇ ಮಾದರಿ: ಕಲ್ಲಯ್ಯಜ್ಜ

ಗದಗದ ‘ಭಿಕ್ಷಾ ಅಭಿಯಾನ’ ರಾಜ್ಯದಲ್ಲಿಯೇ ಮಾದರಿ: ಕಲ್ಲಯ್ಯಜ್ಜ

ಗದಗ: ಲಾಕ್‍ಡೌನ್‍ನಿಂದ ದುಡಿಮೆ ಇಲ್ಲದೇ ಸಂಕಷ್ಟದಲ್ಲಿರುವ ಶ್ರಮಿಕರು, ಕಾರ್ಮಿಕರು ಬಡವರು ಹಸಿವು ಮುಕ್ತರಾಗಲು ಮನುಕುಲ ಕಲ್ಯಾಣಕ್ಕಾಗಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಆರಂಭಿಸಿರುವ ಭಿಕ್ಷಾ ಅಭಿಯಾನ ಯಶಸ್ವಿಯಾಗಲಿ ಎಂದು ವೀರೇಶ್ವರ ಆಶ್ರಮದ ಪೀಠಾಧಿಪತಿಗಳಾದ ಕಲ್ಲಯ್ಯಜ್ಜನವರು ಹೇಳಿದರು.

ಬಿಜೆಪಿ ಯುವ ಮುಖಂಡರಾದ ಅನಿಲ ಮೆಣಸಿನಕಾಯಿ ಅವರು ತಮ್ಮ ಸ್ವಂತ ಹಣದಿಂದ ಲಕ್ಷಾಂತರ ರೂ. ಮೌಲ್ಯದ ದವಸಧಾನ್ಯಗಳನ್ನು ನೀಡಿದರೂ ಬಡವರಿಗೆ ನೀಡುವ ದವಸಧಾನ್ಯಗಳು ರೈತರ ಕೊಡುಗೆಯಾಗಲಿ ಎಂಬ ಸದುದ್ಧೇಶದಿಂದ ಭಿಕ್ಷಾ ಅಭಿಯಾನ ಮಾಡುತ್ತಿರುವುದು ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ ಎಂದು ಕಲ್ಲಯ್ಯಜ್ಜನವರು ಹೇಳಿದರು.

ಬಡವರೊಂದಿಗೆ ಒಡನಾಟವಿರುವ ಅನಿಲ ಮೆಣಸಿನಕಾಯಿ ಅವರ ಭಿಕ್ಷಾ ಅಭಿಯಾನಕ್ಕೆ ಹಲವಾರು ಗ್ರಾಮಗಳಿಂದ ದವಸಧಾನ್ಯಗಳು ಹರಿದು ಬರುತ್ತಿರುವುದನ್ನು ಕೇಳಿದ್ದೇನೆ. ರೈತರ, ವ್ಯಾಪಾರಸ್ಥರ, ಉದ್ದಿಮೆದಾರರ ಜೀವನಾಡಿಗಳಾಗಿರುವ ಕಾರ್ಮಿಕರ ಬದುಕು ಸಮೃದ್ಧಿಯಾಗಲಿ ಎಂದು ಕಲ್ಲಯ್ಯಜ್ಜನವರು ಹರಸಿದರು.

ಭಿಕ್ಷಾ ಅಭಿಯಾನಕ್ಕೆ ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ದವಸ ಧಾನ್ಯಗಳನ್ನು ನೀಡಿದರು. ಬಿಜೆಪಿ ರಾಷ್ಟ್ರೀಯ ಮುಖಂಡರಾದ ಕಾಂತಿಲಾಲ ಬನ್ಸಾಲಿ, ಶಿವಲಿಂಗಶಾಸ್ತ್ರಿ ಸಿದ್ಧಾಪೂರ, ಮಹೇಶ ದಾಸರ, ಬಸವಣ್ಣೆಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿಡ್ಕಿಮಠ ಮತ್ತಿತರರು ಈ ಸಂದರ್ಭದಲ್ಲಿದ್ದರು.

40 ಕ್ವಿಂಟಾಲ್ ಜೋಳ ಸಂಗ್ರಹ:
ಗದಗ ತಾಲೂಕು ಮುಳಗುಂದ ಪಟ್ಟಣದಲ್ಲಿ ಬಿಜೆಪಿ ಮುಖಂಡ ದ್ಯಾಮಣ್ಣ ನೀಲಗುಂದ ನೇತೃತ್ವದಲ್ಲಿ ಭಿಕ್ಷಾ ಅಭಿಯಾನ ಕೈಗೊಂಡು ರೈತರು, ವ್ಯಾಪಾರಸ್ಥರಿಂದ 40 ಕ್ವಿಂಟಾಲ್‍ಗೂ ಅಧಿಕ ಜೋಳ ಹಾಗೂ ಇತರೆ ದವಸಧಾನ್ಯಗಳನ್ನು ಸಂಗ್ರಹಿಸಲಾಯಿತು.

ತಾಲೂಕಿನ ನೀಲಗುಂದ ಗ್ರಾಮದ ಗುದ್ನೇಶ್ವರ ಮಠಕ್ಕೆ ಭೇಟಿ ನೀಡಿದ ಅನಿಲ ಮೆಣಸಿನಕಾಯಿ ಅವರು ಪೂಜ್ಯರ ಆಶೀರ್ವಾದ ಪಡೆದರು.

Related