ಬೀದರ್ ಪೊಲೀಸರ ಭರ್ಜರಿ ಬೇಟೆ

ಬೀದರ್ ಪೊಲೀಸರ ಭರ್ಜರಿ ಬೇಟೆ

ಬೀದರ್ : ಬೀದರ್ ಜಿಲ್ಲೆಯ ಮುನ್ನಾಖೆಳ್ಳಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಸಾಗಿಸುತಿದ್ದ ತಂಡವನ್ನು  ಬಂಧಿಸಿದ್ದಾರೆ.  ಬಂಧಿತರಿಂದ ಬರೋಬ್ಬರಿ ಸರಿಸಮಾರು 1.20 ಕೋಟಿ ರೂಪಾಯಿ ಮೌಲ್ಯದ 120 ಕೆಜಿಯಷ್ಟು ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಿ ಟೋಲ್ ಬಳಿ ಗಾಂಜಾ ಸಾಗಿಸುತ್ತಿದ್ದ ಕಾರಿನ ಮೇಲೆ ಪೊಲೀಸರು ಎಕಾ ಎಕಿ ದಾಳಿ ನಡೆಸಿದ್ದಾರೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಈ ಕಳ್ಳರ ತಂಡದಲ್ಲಿದ್ದ ಇನ್ನಿಬ್ಬರು ಪೊಲೀಸರ ಕೈಗೆ ಸಿಗದೆ  ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಯಶಸ್ವಿ ಕಾರ್ಯಾ ನಡೆಸಿದ ಮುನ್ನಾಖೇಳ್ಳಿ ಪೊಲೀಸರಿಗೆ ಬೀದರ್ ಎಸ್ಪಿ ಮೆಚ್ಚುಗೆ ಸೂಚಿಸಿ, ಬಹುಮಾನ ಘೋಷಿಸಿದ್ದ ಹಿನ್ನಲೆಯಲ್ಲಿ ಪೊಲೀಸರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದಿನ ದಿನಕ್ಕೆ ಗಾಂಜ ವ್ಯಸನಿಗಳು ಹೆಚ್ಚಾಗುತಿದ್ದರ ಹಿನ್ನಲೆಯಲ್ಲಿ ರಾಜ್ಯದ ಬುದ್ದಿ ಜೀವಿಗಳನ್ನ ತಲೆ ತಗ್ಗಿಸುವಂತೆ ಮಾಡಿದೆ.

ಗಾಂಜಾದ ತಂಬಾಕಿನ ವ್ಯಸನಿಗಳಲ್ಲಿ ಪ್ರಮುಖವಾಗಿ ಯುವಕರು ಬಲಿಯಾಗಿರಿವುದು ಪೋಷಕರಿಗೆ ನುಂಗಲಾರದ ತುತ್ತಾಗಿದೆ, ಇನ್ನು ವಿಪರ್ಯಾವೆಂದರೆ ಕಾಲೇಜಿನ ಯುವಕರು ಮತ್ತು ಯುವತಿಯರು ಕೂಡ ಬಲಿಯಾಗಿದ್ದಾರೆ. ಇದನ್ನು ತಡೆಯಲು ಸಾರ್ವಜನಿಕರು ಪರೋಕ್ಷವಾಗಿ ಸ್ವ ಇಚ್ಚೆಯಿಂದ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವರದಿಗಾರ

ಎ.ಚಿದಾನಂದ

Related