ಬೆಂಗಳೂರು: ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ

ಬೆಂಗಳೂರು: ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉದ್ಯಮಿದಾರರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರೆ ಜನ ಸಾಮಾನ್ಯವಾಗಿ ಸುಮಾರು 50ಕ್ಕೂ ಹೆಚ್ಚಾಗಿ ನಮ್ಮ ಮೆಟ್ರೋ ಸಂಚಾರವನ್ನು ಅವಲಂಬಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ಮೆಟ್ರೋ ಸಂಚಾರದಲ್ಲಿ ಇಷ್ಟು ದಿನ ಸಿನಿಮಾ ಶೂಟಿಂಗ್ ಮತ್ತು ಸೀರಿಯಲ್ಸ್ ಶೂಟಿಗೆ ಅವಕಾಶ ಇರಲಿಲ್ಲ. ಆದರಿಗ ಬೆಂಗಳೂರು ನಗರದ ಮೆಟ್ರೋ ಸಂಚಾರದಲ್ಲಿ ಸಿನಿಮಾ ಮತ್ತು ಸೀರಿಯಲ್ ಶೂಟಿಂಗಿಗೆ ಬಿ ಎಂ ಆರ್ ಸಿ ಎಲ್ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ

ಯಸ್…ಇನ್ಮುಂದೆ ಬೆಂಗಳೂರು ಮೆಟ್ರೋ ರೈಲುಗಳಲ್ಲಿ ಶೂಟಿಂಗ್‌ ಕ್ಯಾಮರಾ, ಸೆಲೆಬ್ರೆಟಿಗಳು ಕಾಣಿಸಿಕೊಳ್ಳುವ ಲಕ್ಷಣ ಕಾಣ್ತಿದೆ. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗದೇ ಚಾನ್ಸ್‌ಗಾಗಿ ಕಾಯ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ಕೊಟ್ಟಿದೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಸಿನಿಮಾ ಹಾಗೂ ಸೀರಿಯಲ್‌ಗಳ ಶೂಟಿಂಗ್‌ಗೆ ಅನುಮತಿ ಕೊಡೋಕೆ BMRCL ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳು, ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ ಕೇಳುವ ಕಾಲ ಹತ್ತಿರವಾಗ್ತಿದೆ.

ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಶಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತ ಮಾಡ್ತಿವಿ. 25% ರಿಯಾಯಿತಿ ನೀಡಿರೋದ್ರಿಂದ ಕನ್ನಡ ಚಿತ್ರರಂಗ ಬೆಳೆಯುತ್ತದೆ ಮತ್ತು ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ‌ಚಿತ್ರೀಕರಣ ಆಗುತ್ತದೆ ಎಂದು ತಿಳಿಸಿದರು.

 

Related