ಕಾಗವಾಡದಲ್ಲಿ 3 ಕೊರೋನಾ ಸೋಂಕಿತರು

ಕಾಗವಾಡದಲ್ಲಿ 3 ಕೊರೋನಾ ಸೋಂಕಿತರು

ಕಾಗವಾಡ: ಇಲ್ಲಿ 3 ಕೊರೊನಾ ಸೋಂಕಿತರು ದೃಢಪಟ್ಟಿದ್ದರಿಂದ ಶಿರಗುಪ್ಪಿ ಮತ್ತು ಕಾಗವಾಡ ತಾಲೂಕಿನ ಜನರಲ್ಲಿ ಭಯ ಮೂಡಿಸಿದೆ.

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ವಸತಿಗೃಹದಲ್ಲಿ ಕ್ವಾರಂಟೈನ್‍ವಾಗಿರುವ 3 ಜನರು ಸೋಂಕಿತರಾಗಿದ್ದಾರೆ. ಜೈನ ಸಮಾಜದ ತೀರ್ಥ ಕ್ಷೇತ್ರವಾದ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿಗೆ ಪ್ರವಾಸ ಕೈಗೊಂಡು ತೀರ್ಥಂಕರರ ದರ್ಶನ ಪಡೆದುಕೊಂಡು ಮರಳಿ ಬಂದಿದ್ದರು. ಮೇ.6 ರಂದು ಮರಳಿ ಬಂದ ತೀರ್ಥಯಾತ್ರಿಗಳನ್ನು ಕ್ವಾರಂಟೈನ್ ಮಾಡಿದ್ದರು.
ಶಿರಗುಪ್ಪಿಯ ವಸತಿಗೃಹದಲ್ಲಿ 15 ಜನ ಕ್ವಾರಂಟೈನ್‍ವಾಗಿದ್ದರು. ಇದರಲ್ಲಿ ಈಗ ಓರ್ವ ಮಹಿಳೆ, ಇಬ್ಬರು ಪುರುಷರು ಸೋಂಕಿತರಾಗಿದ್ದಾರೆ. ಅವರ ಕ್ರಮಾಂಕ 1489, 1490, 1493 ಎಂದು ದಾಖಲೆಗೊಳಿಸಿದ್ದಾರೆ.

ಸ್ಥಳಕ್ಕೆ ಕಾಗವಾಡ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಡಿವೈಎಸ್‍ಪಿ ಗಿರೀಶ, ಸಿಪಿಐ ಶಂಕರಗೌಡಾ ಪಾಟೀಲ, ತಾಲೂಕಾ ವೈದ್ಯಾಧಿಕಾರಿಗಳಾದ ಡಾ.ಪುಷ್ಪಲತಾ ಸುನದಕಲ, ಡಾ.ಸೌಮ್ಯಾ ಚೌಗುಲೆ, ತಾಲೂಕಾ ಪಂಚಾಯತಿ ಅಧಿಕಾರಿ ಈರಣ ಗೌಡಾ ಎಗಣ ಗೌಡರ ಇವರು ಭೇಟಿ ನೀಡಿ, ಪರಿಶೀಲನೆ ಮಾಡುತ್ತಾ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಅಂಬ್ಯೂಲೆನ್ಸ್ ಮುಖಾಂತರ ರವಾನಿಸಿದರು.

ಸಮ್ಮೇದ ಶಿಖರ್ಜಿ ಪ್ರವಾಸ ಕೈಗೊಂಡು ಮರಳಿ ಬಂದ 36 ಜನರು ಇದೇ ಶಿರಗುಪ್ಪಿ ಗ್ರಾಮದ ಬೇರೆ ಬೇರೆ ಸ್ಥಳದಲ್ಲಿದ್ದು. ಈ ವರೆಗೆ 3 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಶಿರಗುಪ್ಪಿ ಗ್ರಾಮದಓರ್ವಕ್ಷೌರಿಕಇವರ ಸಂಪರ್ಕದಲ್ಲಿದ್ದನು ಎಂದು ತಿಳಿದು ಬಂದಿದೆ. ಅಧಿಕಾರಿಗಳು ಗ್ರಾಮದಲ್ಲಿ ಬೇಕಾಬಿಟ್ಟಿ ಸಂಚಾರಿಸಬೇಡಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Related