ಕಲಬುರಗಿಯಲ್ಲಿ ಮಾರುಕಟ್ಟೆಗಳು ಬಂದ್

  • In State
  • March 24, 2020
  • 421 Views
ಕಲಬುರಗಿಯಲ್ಲಿ ಮಾರುಕಟ್ಟೆಗಳು ಬಂದ್

ಕಲಬುರಗಿ, ಮಾ. 24 : ಜನ ಸಂದಣಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ತರಕಾರಿ ಮಾರುಕಟ್ಟೆಗಳನ್ನು ಮಂಗಳವಾರ ಸಂಪೂರ್ಣವಾಗಿ ಬಂದ್ ಮಂಡಿಸಲಾಯಿತು.
ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಮಾರುಕಟ್ಟೆಗಳಾದ ಕಣ್ಣಿ ಮತ್ತು ಸೂಪರ್ ಮಾರುಕಟ್ಟೆಗಳನ್ನು ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ಮುಚ್ಚಿಸಿದರು
ಯುಗಾದಿ ಹಬ್ಬ ಹಾಗೂ ದಿನ ನಿತ್ಯದ ಬಳಕೆಗೆಂದು ಮಾರುಕಟ್ಟೆಗಳಲ್ಲಿ ಗುಂಪು-ಗುಂಪಾಗಿ ತರಕಾರಿ, ಹಣ್ಣು ಹಂಪಲು ಖರೀದಿಸುತ್ತಿದ್ದರು. ಒಬ್ಬೊಬ್ಬರಾಗಿ ಖರೀದಿಸಿ ಎಂದರೂ ಜನ ಕೇಳಲಿಲ್ಲ. ಹೀಗಾಗಿ ಜನರನ್ನು ಚದುರಿಸಿ, ವ್ಯಾಪಾರಸ್ಥರಿಂದ ಅಂಗಡಿಗಳನ್ನು ಮುಚ್ಚಿಸಲಾಯಿತು.
ಇನ್ನು, ನಿಷೇಧಾಜ್ಞೆ ನಡುವೆಯೂ ರಸ್ತೆಗಿಳಿದಿದ್ದ ಬೈಕ್, ಆಟೋ ಮತ್ತು ವಾಹನ ಸವಾರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಅನವಶ್ಯಕವಾಗಿ ಮನೆಯಿಂದ ಹೊರಬಂದವನ್ನು ಬೈದು ಮನೆಗಳಿಗೆ ಕಳುಹಿಸಿದರು.

Related