ಬೆಂಗಳೂರು: ರಾಜಭವನಕ್ಕೆ ಬಾಂಬ್ ಬೆದರಿಕೆ!

ಬೆಂಗಳೂರು: ರಾಜಭವನಕ್ಕೆ ಬಾಂಬ್ ಬೆದರಿಕೆ!

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದರ ಬೆನ್ನಲ್ಲೇ ಈಗ ರಾಜ್ಯಭವನಕ್ಕೆ ನಿನ್ನ ರಾತ್ರಿ 11:30ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.‌

ಹೌದು, ರಾಜಭವನದಲ್ಲಿ ಬಾಂಬ್ ಇಟ್ಟಿರೋದಾಗಿ ಎನ್‌ಐಎ ಅಧಿಕಾರಿಗಳಿಗೆ ಕರೆ ಬಂದಿದೆ. ಬೆದರಿಕೆ ಕರೆ ಕೂಡಲೇ ಎನ್‌ಐಎ ಅಧಿಕಾರಿಗಳಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಕೂಡಲೇ ಅಲರ್ಟ್ ಆಗಿರೋ ಪೊಲೀಸರು. ನಿನ್ನೆ ರಾತ್ರಿಯೇ ಪೊಲೀಸರು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ನಿಂದ ರಾಜಭವನಕ್ಕೆ ಹೋಗಿ ಸುತ್ತಮುತ್ತ ಪರಿಶೀಲನೆ ನಡೆಸಿರುವ ಭದ್ರತಾ ಅಧಿಕಾರಿಗಳು. ಇದೀಗ ಕರೆ ಮಾಡಿರುವ ನಂಬರ್ ಟ್ರ್ಯಾಕ್ ಮಾಡುತ್ತಿರುವ ಪೊಲೀಸರು.

ರಾಜಭವನ ಒಳ, ಹೊರಗೆ ತೀವ್ರ ತಪಾಸಣೆ ನಡೆಸಿದ್ದು ಸದ್ಯಕ್ಕೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಆದರೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಾಜಭವನ ವಿಶಾಲ ಮೈದಾನದಂತಿದ್ದು, ಯಾವ ಜಾಗದಲ್ಲಿ ಇಡಲಾಗಿದೆ ಎಂಬುದು ಕರೆ ಮಾಡಿರುವ ದುಷ್ಕರ್ಮಿ ಸ್ಪಷ್ಟಪಡಿಸಿಲ್ಲ. ಇದೊಂದು ಹುಸಿ ಕರೆ ಆಗಿರಬಹುದು ಅದ್ಯಾಗೂ ಪೊಲೀಸರು ಹೈಅಲರ್ಟ್ ಆಗಿದ್ದಾರೆ.

Related