ಮರಳಿ ಶಾಲೆಗೆ

ಮರಳಿ ಶಾಲೆಗೆ

ಬಳ್ಳಾರಿ : ಜಿಲ್ಲೆಯಲ್ಲಿ ನೂರಾರು ವಲಸೆ ಕಾರ್ಮಿಕ ಕುಟುಂಬದ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ನೀಡುವ ಪ್ರಕ್ರಿಯೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಚಾಲನೆ ನೀಡಿದ್ದು, ಸುಮಾರು 1,536 ವಲಸೆ ಕಾರ್ಮಿಕ ಕುಟುಂಬದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಎಂದರು.

ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲಿಗೆ ಅಂದಾಜು 1,536 ಮಂದಿ ವಲಸೆ ಕಾರ್ಮಿಕರು ಪ್ರವೇಶಾತಿ ಪಡೆದಿದ್ದಾರೆ. ಯಾವುದೇ ದಾಖಲಾತಿ ಪರಿಗಣಿಸದೇ ಕೇವಲ ಅವರ ಪೋಷಕರು ನೀಡಿದ ಹೇಳಿಕೆಗೆ ಈ ದಾಖಲಾತಿ ಪ್ರಕ್ರಿಯೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ವಲಸೆ ಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತ ಆಗಬಾರದೆಂದು ರಾಜ್ಯ ಸರ್ಕಾರ ಇತ್ತೀಚೆಗೆ ಸೂಕ್ತ ದಾಖಲೆ ಇಲ್ಲದಿದ್ರೂ ಪರವಾಗಿಲ್ಲ, ಶಾಲೆಗೆ ದಾಖಲಾತಿ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Related