ಕೊನೆಗೂ ರಾಮನಾಯ್ಕನಹಳ್ಳಿಗೆ ಸರ್ಕಾರಿ ಬಸ್ ಬಂತು

ಕೊನೆಗೂ ರಾಮನಾಯ್ಕನಹಳ್ಳಿಗೆ ಸರ್ಕಾರಿ ಬಸ್ ಬಂತು

ಕೊಟ್ಟೂರು  : ತಾಲೂಕಿನ ಗಡಿ ಗ್ರಾಮ ರಾಮನಾಯ್ಕನ ಹಳ್ಳಿಗೆ ಗುರುವಾರ ಸರ್ಕಾರಿ ಬಸ್ ಬರುತ್ತಿದ್ದಂತೆ ಇಡೀ ಗ್ರಾಮವೇ ಸಂಭ್ರಮಿಸಿತು.

ಕೆಂಪು ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ಜನತೆ ಸ್ವಾಗತಿಸಿ ಬಸ್‌ನು ಶೃಂಗರಿಸಿ ಪೂಜೆ ಸಲ್ಲಿಸಿ ನಮಿಸಿ ಖುಷಿಪಟ್ಟರು.

ಗ್ರಾಮದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ರಾಮನಾಯ್ಕನ ಹಳ್ಳಿಯಿಂದ ಮೂರು ಕಿ.ಮೀ. ಹರಾಳು ಕ್ರಾಸ್ ಬಂದು ಕೊಟ್ಟೂರಿಗೆ ಹೋಗಬೇಕಾಗಿತ್ತು.

ಬಸ್ ಸೌಲಭ್ಯಕ್ಕಾಗಿ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಬಸ್ ಸೌಕರ್ಯ ಕಲ್ಪಿಸಿದ್ದಕ್ಕೆ ಗ್ರಾಮದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಸಕ ಭೀಮಾನಾಯ್ಕ, ಜಿ,ಪಂ ಸದಸ್ಯ ಎಂಎಂಜೆ ಹರ್ಷವರ್ಧನ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Related