ಕೊರೋನದಿಂದ ಮೃತ ಪಟ್ಟವರಿಗೆ ಧನ ಸಹಾಯ

ಕೊರೋನದಿಂದ ಮೃತ ಪಟ್ಟವರಿಗೆ ಧನ ಸಹಾಯ

ಕೆಆರ್ ಪುರ-ಕೊರೋನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತರಿಗೆ, ಗ್ರಾ.ಪಂ ಸಿಬ್ಬಂದಿಗಳಿಗೆ ಅಭಿನಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪಂಚಾಯತಿ ಉಪಾಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದರು.
ಕ್ಷೇತ್ರದ ಶಿಶು ಮಂದಿರ ಆವರಣದಲ್ಲಿ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಕೊಂಡು ಅವರು, ಕೊರೋನದ ಮೊದಲ ಅಲೆ ಹಾಗು ಎರಡನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಬಡವರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದರು ಕಷ್ಟಕ್ಕೆ ಸಿಲುಕಿದವರಿಗೆ ಎಲ್ಲರೂ ನೆರವಾಗುವಂತೆ ಕೋರಿದರು. ಪ್ರತಿ ವರ್ಷ ಹುಟ್ಟು ಹಬ್ಬವನ್ನು ಶಿಶು ಮಂದಿರ ಮಕ್ಕಳೊಂದಿಗೆ ಆಚರಿಕೊಳ್ಳುತ್ತಿದ್ದು, ಈ ಭಾರಿ ವಿಶೇಷವಾಗಿ ಕೊರೋನ ದಿಂದ ಮೃತ ಪಟ್ಟ ಕುಟುಂಬದವರಿಗೆ ಸಹಾಯ ಧನ ನೀಡಲಾಗುವುದು ಎಂದರು. ಕೊರೋನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಆಶಾಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತಯರಿಗೆ, ಗ್ರಾ.ಪಂ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು. ನನ್ನ ಹುಟ್ಟುಹಬ್ಬ ವನ್ನು ಸೇವಾಕಾರ್ಯವಾಗಿ ಮಾಡುವ ಮೂಲಕ ಸಮಾಜಕ್ಕೆ ಖುಣ ತೀರಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೆನೆಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅದ್ಯಕ್ಷ ನಟರಾಜ, ನಿಕಟ ಪೂರ್ವ ಜಿ.ಪಂ ಸದಸ್ಯ ಗಣೇಶ್, ಧನಂಜಯ, ಶಿಶುಂದಿರದ ಅಧ್ಯಕ್ಷ ಆನಂದ್, ಪಂಚಾಯತಿ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.

Related